Header Ads
Header Ads
Breaking News

ಮಂಜೇಶ್ವರದ ಕುಂಜತ್ತೂರಿನಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಭೂತ ಬಲಿ ಉತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮ

 

ಮಂಜೇಶ್ವರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕುಂಜತ್ತೂರು ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಸಿ ಕೊಂಡು ಬರುತ್ತಿರುವ ಮೂರು ದಿನಗಳಿಂದ ನಡೆಯುತ್ತಿದ್ದ ಭೂತಬಲಿ ಉತ್ಸವ ಸಂಪನ್ನಗೊಂಡತು.

ಆಡಳಿತ ಮೊಕ್ತೇಸರಾದ ವಿ ರವೀಂದ್ರ ರಾವ್, ಪವಿತ್ರಪಾಣಿ ಕೆ ಎಸ್ ಕೃಷ್ಣ ಭಟ್ , ಪಿ ಕೆ ರವೀಂದ್ರ ಶೆಟ್ಟಿ, ಕೆ ವಿಶ್ವನಾಥ ಶೆಟ್ಟಿ ಹಾಗೂ ವಿದ್ಯಾನಿಕೇತನದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಯವರ ನೇತೃತ್ವದಲ್ಲಿ ಶನಿವಾರ ಪ್ರಾರ್ಥಣೆ , ನಿತ್ಯಪೂಜೆ ಮತ್ತು ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು.

ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಸಂಗಮ ನಡೆಯಿತು. ಬಳಿಕ ಛತ್ರಪತಿ ಪ್ರಭು ಸಭಾಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಾಮಚಂದ್ರ ಸ್ವಾಮೀಜಿ ಕಪಿಲಾಶ್ರಮ, ಉತ್ತರಕಾಶಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಬೆಳೂರು ಗೋಪಾಲ ಕೃಷ್ಣ, ಶ್ರೀ ಕೃಷ್ಣ ಎನ್ ಉಚ್ಚಿಲ್, ಬಾಸ್ಕರ ರೈ ಮಜಲ್ತೋಡಿ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.

ಬಳಿಕ ಬಾನುವಾರದಂದು ಶ್ರೀ ದೇವರ ಬಯ್ಯನ ಬಲಿ ಹೊರಟ ಬಳಿಕ ರಾತ್ರಿ ಉದ್ಯಾವರ ಶ್ರೀ ಭವಗವತೀ ಅಮ್ಮನವರ ಬೇಟಿ ಉತ್ಸವ ನಡೆದು ವಸಂತ ಕಟ್ಟೆ ಪೂಜೆ, ರಂಗಪೂಜೆ ಪ್ರಸಾದ ವಿತರಣೆ ನಡೆದ ಬಳಿಕ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ, ಹಾಗೂ ಶ್ರೀ ಶರತ್ ಶೆಟ್ಟಿ ಪಡುವಳ್ಳಿ ಇವರಿಂದ ಹರಿಕಥೆ ಪ್ರಸಂಗ ನಡೆಯಿತು.
ಬಳಿಕ ಸಮಾಪ್ತಿ ದಿನವಾದ ಸೋಮವಾರದಂದು ಬೆಳಗ್ಗಿನ ಬಲಿ ಹೊರಟ ಬಳಿಕ ದರ್ಶನ ಬಲಿ ಹಾಗೂ ಉದ್ಯಾವರ ಶ್ರೀ ದೈವಗಳ ಬೇಟಿ ಮತ್ತು ಬಟ್ಲು ಕಾಣಿಕೆ, ಮಹಾಪ್ರಸಾದ ನಡೆಯಿತು.

ಬಳಿಕ ಮಹಾ ಮಂತ್ರಾಕ್ಷತೆ, ಶ್ರೀ ನಾಗದೇವರಿಗೆ ಮತ್ತು ಶ್ರೀ ರಕ್ತೇಶ್ವರಿ ಅಮ್ಮನವರಿಗೆ ತಂಬಿಲ ಸೇವೆ ಹಾಗೂ ಮಹಾ ಪೂಜೆ ಮತ್ತು ಪ್ರಸಾದ ವಿತರಣೆಯೊಂದಿಗೆ ಮೂರು ದಿವಸಗಳ ಕಾಲ ವಿಜೃಂಭಣೆಯಿಂದ ಜರಗಿದ ಭೂತಬಲಿ ಉತ್ಸವ ಶನಿವಾರದಂದು ಸಂಪನ್ನ ಗೊಂಡಿತು.

Related posts

Leave a Reply