Header Ads
Header Ads
Breaking News

ಮಂಜೇಶ್ವರದ ಚೆರ್ಕಳ-ಕಲ್ಲಡ್ಕ ರಸ್ತೆ ಅವ್ಯವಸ್ಥೆ ಖಾಸಗಿ ಬಸ್ ನೌಕರರ ಮುಷ್ಕರ ಪ್ರತಿಭಟನೆಗೆ ಸ್ಥಳೀಯರ ಬೆಂಬಲ

 

ಮಂಜೇಶ್ವರದ ಚೆರ್ಕಳ – ಕಲ್ಲಡ್ಕ ರಸ್ತೆ ಅವ್ಯವಸ್ಥೆಯನ್ನು ವಿರೋಧಿಸಿ ಬಸ್ಸ್ ನೌಕರರ ಸಂಘದ ನೇತೃತ್ವದದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಗೆ ಬಸ್ ಚಾಲಕರು , ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದರು. ಖಾಸಗಿ ಬಸ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಚೆರ್ಕಳದಿಂದ ಬದಿಯಡ್ಕ, ಪೆರ್ಲ, ಏತಡ್ಕ, ಬೆಳಿಂಜ, ಕಿನ್ನಿಂಗಾರು, ಸ್ವರ್ಗ, ವಾಣಿನಗರದಲ್ಲಿ ಬಸ್ ಸಂಚಾರ ಮಾಡಿಲ್ಲ.
ವಿದ್ಯಾರ್ಥಿಗಳು, ಸರಕಾರಿ ನೌಕರರು, ಇತರ ಕಾರ್ಮಿಕರು ಬಸ್ ಮುಷ್ಕರದಿಂದ ತೊಂದರೆಗೀಡಾದರು. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಮಾತ್ರ ಸಂಚಾರ ಮಾಡಿತ್ತು. ಖಾಸಗಿ ಬಸ್ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿ ಪಳ್ಳತ್ತಡ್ಕ ಸೇತುವೆ ಹೊಂಡದಲ್ಲಿ ನಾಗರಿಕರು ಬಾಳೆ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ರಸ್ತೆಯನ್ನು ಸರಿಪಡಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕರರು ಎಚ್ಚರಿಕೆ ನೀಡಿದರು.

Related posts

Leave a Reply