Header Ads
Header Ads
Breaking News

ಮಂಜೇಶ್ವರದ ತಲಪಾಡಿಯಲ್ಲಿ ಕಾಸ್ರೋಟ್ ಕೆಫೆ : ಕೇರಳದ ಕಂದಾಯ ಸಚಿವ ಚಂದ್ರಶೇಖರನ್‌ರಿಂದ ಉದ್ಘಾಟನೆ

ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ ಅರ್ ಟಿ ಓ ತಪಾಸಣಾ ಕೇಂದ್ರದ ಸಮೀಪದಲ್ಲಿ “ಕಾಸ್ರೋಟ್ ಕೆಫೆ” ಎಂಬ ಹೆಸರಿನಲ್ಲಿ ಸ್ಥಾಪಿಸಲಾದ ಕೆಫೆಯನ್ನು ಕೇರಳ ಕಂದಾಯ ಸಚವ ಇ ಚಂದ್ರಶೇಖರನ್ ಉದ್ಘಾಟಿಸಿದರು.

ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರು ಮಾತನಾಡಿ, ಕಾಸರಗೋಡು ಜಿಲ್ಲೆಯ ತಲಪಾಡಿಯಿಂದ ಕಾಲಿಕಡವು ತನಕದ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಸುಮಾರು ಎಂಟು ಈ ರೀತಿಯ ಯೋಜನೆಗಳನ್ನು ರೂಪೀಕರಿಸಲಾಗಿದೆ. ಯಾತ್ರಿಕರಿಗೆ ಅಲ್ಪ ವಿಶ್ರಾಂತಿಯನ್ನು ಪಡೆಯಲು, ಅವರಿಗೆ ಆವಶ್ಯಕವಾದ ಉತ್ತಮ ಆಹಾರವನ್ನು ನೀಡುವ ಉದ್ದೇಶದಿಂದ ಸರಕಾರ ಇಂತಹ ಕೆಫೆಗಳನ್ನು ಸ್ಥಾಪಿಸಿದೆ. ಈ ಕಾರ್ಯಕ್ರಮಕ್ಕೆ ಮಂಜೇಶ್ವರದ ಯುಡಿಎಫ್ ನಯಾವುದೇ ಜನಪ್ರತಿನಿಧಿಗಳು ಹಾಜರಗದೇ ಬಹಿಷ್ಕರಿಸಿರುವುದಕ್ಕೆ ಜಿಲ್ಲಾಧಿಕಾರಿಯವರು ದುಃಖವನ್ನು ವ್ಯಕ್ತಪಡಿಸಿದರು.

ಸಿಪಿಐ ನೇತರರಾದ ಜಯರಾಂ ಬಲ್ಲಂಗುಡೇಲ್, ದಯಾಕರ ಮಾಡ, ಡಿ ವೈ ಎಫ್ ಐ ಕುಂಜತ್ತೂರು ವಿಲೇಜ್ ಸಮಿತಿ ಅಧ್ಯಕ್ಷ ಮುನೀರ್ ತೂಮಿನಾಡು, ಕೆಫೆಯನ್ನು ಚಲಾಯಿಸಲು ಗುತ್ತಿಗೆಗೆ ಪಡೆದ ಶಾಜಿ ಕಣ್ಣನ್, ಅಕ್ತರ್ ಹುಸೈನ್, ಸಲೀಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *