Header Ads
Header Ads
Breaking News

ಮಂಜೇಶ್ವರದ ದುರ್ಗಿಪಳ್ಳದಲ್ಲಿ ತುಳು ಅಕಾಡೆಮಿ ಭವನಕ್ಕೆ ಶಿಲಾನ್ಯಾಸ : ನಿನ್ನೆ ತಡರಾತ್ರಿ ತುಳು ಭವನದ ನೀಲಿ ನಕಾಶೆ, ಬ್ಯಾನರ್‌ಗೆ ಹಾನಿ

ಮಂಜೇಶ್ವರ: ಮಂಜೇಶ್ವರ ಹೊಸಂಗಡಿ ಸಮೀಪದ ದುರ್ಗಿಪಳ್ಳದಲ್ಲಿ ತುಳು ಅಕಾಡೆಮಿಯ ನೂತನ ತುಳು ಭವನ ನಿರ್ಮಾಣಕ್ಕೆ ಕಳೆದ ಬುಧವಾರ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಇದೀಗ ತುಳು ಭವನದ ನೀಲಿ ನಕಾಶೆ ಮತ್ತು ಬ್ಯಾನರನ್ನು ಸಮಾಜ ದ್ರೋಹಿಗಳು ಹರಿದು ಹಾಕಿ ದುಷ್ಕ್ಷೃತ್ಯ ಮೆರೆದ ಘಟನೆ ನಡೆದಿದೆ.

ತುಳು ಅಕಾಡೆಮಿಯ ತುಳು ಭವನಕ್ಕಾಗಿ ಕಡಂಬಾರ್ ಗ್ರಾಮದ ದುರ್ಗಿಪಳ್ಳದಲ್ಲಿ ಒಂದು ಎಕರೆ ಸ್ಥಳವನ್ನು ಸರಕಾರ ಮಂಜೂರು ಮಾಡಿತ್ತು. ಆದರೆ ಕಳೆದ ರಾತ್ರಿ ತುಳು ಭವನ ನಿರ್ಮಾಣ ಪರಿಸರದಲ್ಲಿ ಸ್ಥಾಪಿಸಲಾಗಿದ್ದ ತುಳು ಭವನದ ನೀಲಿನಕಾಶೆಯ ಬ್ಯಾನರ್ ನ್ನು ಸಮಾಜ ದ್ರೋಹಿಗಳು ಹರಿದು ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ. ಬಟ್ಟೆಯಲ್ಲಿ ತಯಾರಿಸಿದ ಬ್ಯಾನರ್ ಕೂಡಾ ಹರಿದು ಹಾಕಲಾಗಿದೆ. ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ ಒಂದು ಚೂರಿ ಪತ್ತೆಯಾಗಿದೆ. ಸಮಾಜ ದ್ರೋಹಿಗಳನ್ನು ಮಟ್ಟ ಹಾಕಲು ಪೋಲೀಸರು ತಯಾರಾಗಬೇಕು ಎಂದು ಅಕಾಡೆಮಿ ಕಾರ್ಯದರ್ಶಿಗಳು ಮಂಜೇಶ್ವರದ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Related posts

Leave a Reply

Your email address will not be published. Required fields are marked *