Header Ads
Header Ads
Breaking News

ಮಂಜೇಶ್ವರದ ಪಂಚಾಯತ್ ಕಚೇರಿಯಲ್ಲಿ ಸಾಮಾಜಿಕ ಸುರಕ್ಷಾ ಪಿಂಚಣಿ ಅದಾಲತ್

ಮಂಜೇಶ್ವರ: ಮಂಜೇಶ್ವರ ಗ್ರಾ. ಪಂ. ನಲ್ಲಿ ವಿವಿಧ ಕಾರಣಗಳಿಂದ ತಿರಸ್ಕರಿಸಲ್ಪಟ್ಟ ಸಾಮಜಿಕ ಸುರಕ್ಷಾ ಪಿಂಚಣಿ ಅರ್ಜಿದಾರರ ಅಹವಾಲು ಪರಿಹಾರಕ್ಕಾಗಿ ಪಂ. ಕಚೇರಿಯಲ್ಲಿ ಪಿಂಚಣಿ ಅದಾಲತ್ ನಡೆಯಿತು.ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಅದಾಲತ್‍ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸರಕಾರದ ಹೊಸ ಸುತ್ತೋಲೆಯಿಂದಾಗಿ ಹಲವರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಪಂಚಾಯತ್‍ನಲ್ಲಿ ವ್ಯಾಪ್ತಿಯಲ್ಲಿ ಬರುವ ಪಿಂಚಣಿ ಸಿಗದೇ ಇರುವವರನ್ನು ಕರೆಸಿ ಅದಾಲತ್ ನಡೆಸಿ ಅರ್ಹವೆಂದು ಅದಾಲತ್ ನಲ್ಲಿ ಸಾಬೀತಾದರೆ ಅವರಿಗೆ ಪಿಂಚಣಿ ಲಭಿಸುವ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಅವರು ಹೇಳಿದರು.

ಪಂಚಾಯತ್ ವತಿಯಿಂದ ಸುಮಾರು 250 ಮಂದಿ ಪಿಂಚಣಿದಾರರಿಗೆ ಅದಾಲತ್‍ಗೆ ಹಾಜರಾಗಲು ಪತ್ರವನ್ನು ರವಾನಿಸಲಾಗಿತ್ತು. ಆ ಪೈಕಿ ಕೇವಲ 60 ಮಂದಿ ಮಾತ್ರ ಅದಾಲತ್ ಗೆ ಹಾಜರಾಗಿದ್ದರು. ಇದರಲ್ಲಿ 50 ಮಂದಿಯ ಅರ್ಜಿ ಅಂಗೀಕಾರವಾಗಿದೆ. ಉಳಿದ 10 ಮಂದಿಯದ್ದು ಮಾತ್ರ ಪರಿಗಣನೆಯಲ್ಲಿದೆ. ಮುಂದಿನ ದಿನಗಳಲ್ಲಿ ಅರ್ಹತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ ಬಳಿಕ ಪರಿಗಣಿಸಲಾಗುವುದಾಗಿ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.

Related posts

Leave a Reply