Header Ads
Breaking News

ಮಂಜೇಶ್ವರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲನಿಯಲ್ಲಿ ಎಸ್ಪಿ ಅದಾಲತ್; 200ಕ್ಕೂ ಅಧಿಕ ಕುಟುಂಬಗಳು ಭಾಗಿ

ಕಾಸರಗೋಡು ಜಿಲ್ಲೆಯ ಎಸ್‍ಎಂಎಸ್ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲನಿಗಳಲ್ಲಿ ಪೊಲೀಸ್ ವರಿಷ್ಟಾಧಿಕಾರಿಯವರ ಮುಂದಾಳತ್ವದಲ್ಲಿ ಅದಾಲತ್ ಕಾರ್ಯಕ್ರಮ ನಡೆಯಿತು.

ಕಾಲನಿವಾಸಿಗಳ ದೂರುಗಳನ್ನು ಸ್ವೀಕರಿಸಿ ಅದಕ್ಕೊಂದು ಪರಿಹಾರವನ್ನು ಕಂಡು ಕೊಳ್ಳುವ ಉದ್ದೇಶದಿಂದ ನಡೆಸಲ್ಪಡುವ ಜನಮೈತ್ರಿ ಅದಾಲತ್ ಮಂಜೇಶ್ವರ ಗ್ರಾ. ಪಂ. ಆರನೇ ವಾರ್ಡ್ ಆಗಿರುವ ಗುತ್ತು ಪರಿಶಿಷ್ಟ ಜಾತಿ, ವಿಭಾಗದ ಕಾಲನಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಡಿಷನಲ್ ಎಸ್ಪಿ ಪಿ.ಬಿ ಪ್ರಶೋಬ್ ಉದ್ಘಾಟಿಸಿದರು.ವಾರ್ಡ್ ಸದಸ್ಯೆ ರಸೀನಾ ಖಾದರ್ ಅಧ್ಯಕ್ಷತೆ ವಹಿಸಿದರು. ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಕೆಲಸಕ್ಕೆ ಕಳುಹಿಸದೇ ಅವರಿಗೆ ಜವಾಬ್ದಾರಿಯುತವಾದ ವಿದ್ಯಾಭ್ಯಾಸವನ್ನು ನೀಡಲು ಪೋಷಕರು ತಯಾರಾಗಬೇಕಿದೆ ಎಂದು ಹೇಳಿದರು.

ಈ ಸಂದರ್ಭ ಕಾಸರಗೊಡು ಡಿವೈಎಸ್ಪಿ ಹರೀಶ್ಚಂದ್ರ ನಾಯ್ಕ್, ಮಂಜೇಶ್ವರ ಸಿ.ಐ ದಿನೇಶ್, ಮಂಜೇಶ್ವರ ಎಸ್ಸೈ ವಿಷ್ಣು ಪ್ರಸಾದ್, ಸೇರಿದಂತೆ ಪ್ರಮುಖ ಎಲ್ಲಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *