Header Ads
Header Ads
Breaking News

ಮಂಜೇಶ್ವರದ ಪುರುಷಂಗೋಡಿ ಬದ್ರಿಯಾ ಜುಮಾ ಮಸೀದಿಯ ನೂತನ ಆವರಣ ಗೋಡೆ ಉದ್ಘಾಟನೆ

ಮಂಜೇಶ್ವರದ ಪುರುಷಂಗೋಡಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಕಲ್ಲೂರು ರವರ ಅಧ್ಯಕ್ಷತೆಯಲ್ಲಿ ಪುರುಷಂಗೋಡಿ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಸೀದಿಗಾಗಿ ಅಬ್ಬಾಸ್ ಹಾಜಿಯವರು ತನ್ನ ಸ್ವಂತ ಖರ್ಚಿನಲ್ಲಿ ನಿರ್ಮಿಸಲಾದ ಆವರಣದ ಗೋಡೆಯನ್ನು ಅಸಯ್ಯದ್ ಕೆ ಎಸ್ ಆಟ್ಟಕೋಯ ತಂಘಲ್ ಕುಂಬೋಲ್ ರವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಇಂತಹ ಮಹತ್ತರದ ಕಾರ್ಯಕ್ಕೆ ಕೈ ಜೋಡಿಸಿದ ಅಬ್ಬಾಸ್ ಹಾಜಿ ಕಲ್ಲೂರಿಗೆ  ದಯಾಮಯಾನಾದ ಅಲ್ಲಾವು ಅದರ ಪ್ರತಿಫಲವನ್ನು ನೀಡಿ ಇಹಪರದಲ್ಲೂ ವಿಜಯಶಾಲಿಯನ್ನಾಗಿಸಲಿ ಎಂಬುದಾಗಿ ಹಾರೈಸಿದರು.

ಬಳಿಕ ಕೆ.ಎಸ್ ಆಟ್ಟಕೋಯ ತಂಘಲ್ ರವರನ್ನು ಅಬ್ಬಾಸ್ ಹಾಜಿಯವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಅಸಯ್ಯದ್ ಆಹ್ಮದ್ ಮುಕ್ತಾರ್ ತಂಘಲ್, ಅಸಯ್ಯದ್ ತ್ವಾಹಾ ಬಾಫಖಿ ತಂಘಲ್ ಕೊಯಿಲಾಂಡಿ, ಅಬ್ದುಲ್ ಹಮೀದ್ ಸಖಾಫಿ, ಅಝೀಝ್ ಕಲ್ಲೂರು, ಖಲೀಲ್ ಬಾ ಹಸನಿ, ಹುಸೈನಾರ್ ಮುಸ್ಲಿಯಾರ್, ಎಸ್ ಅಬ್ದುಲ್ಲ, ಮೊಹಮ್ಮದ್ ಪರನೀರ್, ಸಿದ್ದೀಖ್ ಪಾಡಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply