Header Ads
Header Ads
Header Ads
Breaking News

ಮಂಜೇಶ್ವರದ ಬೆಜ್ಜದ ನಿರ್ಜನ ಪ್ರದೇಶದಲ್ಲಿ ಗಾಂಜಾ ಪತ್ತೆ 10 ಲಕ್ಷ ರೂ ಮೌಲ್ಯದ 72 ಕಿಲೋ ಗಾಂಜ ಪತ್ತೆ ಮಂಜೇಶ್ವರ ಪೊಲೀಸರ ಕಾರ್ಯಾಚರಣೆ

ಮಂಜೇಶ್ವರ : ಮೀಂಜ ಗ್ರಾಮ ಪಂಚಾಯತ್‌ನ ಬೆಜ್ಜ ಬಟ್ಟಿಪದವಿನ ನಿರ್ಜನ ಪ್ರದೇಶವೊಂದರಲ್ಲಿ ಬ್ಯಾಗಿನಲ್ಲಿ ತುಂಬಿಸಲ್ಪಟ್ಟ ಸ್ಥಿತಿಯಲ್ಲಿ ಸುಮಾರು 72 ಕಿಲೋ ಗಾಂಜಾವನ್ನು ಮಂಜೇಶ್ವರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮಂಜೇಶ್ವರ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದೆ. ಮಂಜೇಶ್ವರ ಠಾಣಾಧಿಕಾರಿ ಅನೂಪ್ ಕುಮಾರ್‌ರಿಗೆ ಲಭಿಸಿದ ರಹಸ್ಯ ಮಾಹಿತಿಯಂತೆ ಈ ದಿಢೀರ್ ದಾಳಿ ನಡೆದಿದೆ. ಕಳೆದ ಎರಡು ವರ್ಷಗಳಲ್ಲಿ ಪತ್ತೆ ಹಚ್ಚಲಾದ ಗಾಂಜಾ ಪೈಕಿ ಇದು ಭಾರಿ ಮೌಲ್ಯದ ಗಾಂಜಾ ಕಾರ್ಯಾಚರಣೆಯಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಗೆ ವಿತರಿಸಲು ಇಲ್ಲಿ ಶೇಖರಿಸಿಟ್ಟಿರಬಹುದಾಗಿ ಶಂಕಿಸಲಾಗಿದೆ. ಗಾಂಜಾವನ್ನು ಮಂಜೇಶ್ವರ ಠಾಣೆಗೆ ಕೊಂಡೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಮಂಜೇಶ್ವರ ಠಾಣಾಧಿಕಾರಿ ಅನೂಪ್ ಕುಮಾರ್ ತಿಳಿಸಿದ್ದಾರೆ.

Related posts

Leave a Reply