Header Ads
Breaking News

ಮಂಜೇಶ್ವರದ ಮುಸೋಡಿಯಲ್ಲಿ ತೀವ್ರಗೊಂಡ ಕಡಲ್ಕೊರೆತ

ಮಂಜೇಶ್ವರ: ಮಂಜೇಶ್ವರ ತಾಲೂಕಿನ ಕರವಾಳಿ ತೀರ ಪ್ರದೇಶವಾದ ಉಪ್ಪಳ ಮುಸೋಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕಳೆದ ಮೂರು ದಿನಗಳಿಂದ ಈ ಪರಿಸರದಲ್ಲಿ ಕಡಲ್ಕೊರೆತದಿಂದ ಎರಡು ಮನೆಗಳು ಈಗಾಗಲೇ ಸಮುದ್ರ ಪಾಲಾಗಿವೆ.
ಮುಸೋಡಿಯಲ್ಲಿ ಮೊಹಮ್ಮದ್ ಹಾಗೂ ನಫೀಸ ಅವರ ಮನೆಗಳು ಭಾಗಶಃ ನೀರು ಪಾಲಾಗಿದ್ದು, ನಾಗರಿಕರು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ. ಇಲ್ಲಿ 29ಕ್ಕೂ ಹೆಚ್ಚು ತೆಂಗಿನ ಮರಗಳು ನೀರು ಪಾಲಾಗಿವೆ. ಮಾತ್ರವಲ್ಲ ಸಮೀಪದ ಹನುಮಾನ್ನಗರ, ಶಾರದಾನಗರಳಲ್ಲಿಯೂ ಕಡಲ್ಕೊರೆತ ಹೆಚ್ಚಿದೆ. ಅನೇಕ ಮನೆಗಳು ಅಪಾಯದಲ್ಲಿದ್ದು 8ರಿಂದ9 ಕುಟುಂಬಗಳನ್ನು ಭದ್ರತೆಯ ದೃಷ್ಟಿಯಿಂದ ಸ್ಥಳಾಂತರ ಮಾಡಲು ಆದೇಶ ನೀಡಲಾಗಿದೆ.

Related posts

Leave a Reply

Your email address will not be published. Required fields are marked *