Header Ads
Header Ads
Breaking News

ಮಂಜೇಶ್ವರದ ಯತೀಂ ಖಾನಾ ಆವರಣದಲ್ಲಿ ಅನುಸ್ಮರಣಾ ಕಾರ್ಯಕ್ರಮ

ಮಂಜೇಶ್ವರ: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಮಂಜೇಶ್ವರ ವಲಯದ ವತಿಯಿಂದ ಇತ್ತೀಚೆಗೆ ಅಗಲಿದ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಹಾಗೂ ಅತ್ತಿಪಟ್ಟ ಮೊಯಿದೀನ್ ಉಸ್ತಾದ್ ಅವರ ಅನುಸ್ಮರಣಾ ಕಾರ್ಯಕ್ರಮ ಮಂಜೇಶ್ವರ ಯತೀಂ ಖಾನಾ ಆವರಣದಲ್ಲಿ ನಡೆಯಿತು.ಅತ್ತಾವುಲ್ಲ ತಂಘಲ್ ಪ್ರಾರ್ಥಣೆ ನಡೆಸಿದ ಬಳಿಕ ಯುಎಚ್ ಅಬ್ದುಲ್ ರಹ್ಮಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭ ಅಬ್ದುಲ್ ಹಾಶಿರ್ ಅಲ್ ಹಾಮಿದಿ ಮುಖ್ಯ ಪ್ರಭಾಷಣ ನಡೆಸಿದರು. ವೇದಿಕೆಯಲ್ಲಿ ಇಬ್ರಾಹಿಂ ಉಮ್ಮರ್ ಹಾಜಿ, ಇಬ್ರಾಹಿಂ ಬಟರ್ ಫ್ಲೈ, ಫಾರೂಕ್ ಉಸ್ತಾದ್, ಮೂಸ ಕುಂಞಿ ಹಾಜಿ ಮೊದಲಾದವರು ಉಪಸ್ಥರಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಪಾಲ್ಗೊಂಡಿದ್ದರು.

Related posts

Leave a Reply