Header Ads
Header Ads
Breaking News

ಮಂಜೇಶ್ವರದ ರಾಗಂ ಜಂಕ್ಷನ್‌ನಲ್ಲಿ ಸಾರ್ವಜಿಕ ಸ್ಥಳಕ್ಕೆ ತ್ಯಾಜ್ಯ ನೀರು : ಇಲಾಖೆಗೆ ದೂರು ನೀಡಿದ್ದರೂ ಪ್ರಯೋಜವಿಲ್ಲ

ಮಂಜೇಶ್ವರ ಪರಿಸರದ ರಾಗಂ ಜಂಕ್ಷನ್‌ನಲ್ಲಿ ಕೆಲವು ವಸತಿ ಗೃಹಗಳಿಂದ ಸಾರ್ವಜನಿಕ ಸ್ಥಳಕ್ಕೆ ತ್ಯಾಜ್ಯ ನೀರು ಹರಿಯುತ್ತಿದೆ. ಮೂಗು ಮುಚ್ಚಿಕೊಂಡೇ ಇಲ್ಲಿನ ಪರಿಸರದ ಜನರು ವಾಸಿಸಬೇಕಾಗದ ದುಸ್ಥಿತಿ ಬಂದೋದಗಿದೆ. ಅಲ್ಲದೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ ಜನರು.ಮಂಜೇಶ್ವರ ರಾಗಂ ಜಂಕ್ಷನಿನ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಖಾಸಗೀ ಬಾಡಿಗೆ ವಸತಿ ಗೃಹಗಳ ಕಟ್ಟಡ ಮಾಲಕರ ಎಡವಟ್ಟಿನಿಂದಾಗಿ ರಾಗಂ ಜಂಕ್ಷನ್ ಸಾರ್ವಜನಿಕ ಪರಿಸರದ ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ಪ್ರಯಾಣಿಕರು ಕೊಳಚೆ ನೀರಿನ ದುರ್ವಾಸನೆಯಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ಇನ್ನೂ ಮುಂದುವರಿಯುತ್ತಿದೆ. ಈ ಬಗ್ಗೆ ಹಲವಾರು ಸಲ ಸ್ಥಳೀಯರು ಮಂಜೇಶ್ವರ ಗ್ರಾ. ಪಂ. ಅಧಿಕಾರಿಗಳಲ್ಲಿ, ಜನಪ್ರತಿನಿಧಿಗಳಲ್ಲಿ ಹಾಗೂ ಆರೋಗ್ಯ ಇಲಾಖೆಯವರಲ್ಲಿ ನಿರಂತರವಾಗಿ ಈ ಬಗ್ಗೆ ಹೇಳಿಕೊಳ್ಳುತಿದ್ದರೂ ಹಲವಾರು ಸಲ ಫ್ಲಾಟ್ ಮಾಲಕನಿಗೆ ನೋಟೀಸು ನೀಡಿದ್ದರೂ ಕಟ್ಟಡ ಮಾಲಕ ಮಾತ್ರ ಅದೆಲ್ಲವನ್ನೂ ಗಾಳಿಗೆ ತೂರಿಕೊಂಡು ಫ್ಲಾಟಿನ ತ್ಯಾಜ್ಯ ನೀರು ಸಾರ್ವಜನಿಕ ಸ್ಥಳಕ್ಕೆ ಹರಿದು ಬರುತ್ತಿರುವುದಾಗಿ ಊರವರು ಆರೋಪಿಸುತಿದ್ದಾರೆ.

ಕೆಲ ತಿಂಗಳ ಹಿಂದೆ ಈ ಪ್ರದೇಶದಲ್ಲಿ ಹಂದಿ ಜ್ವರ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡರೂ ಇನ್ನೂ ಆರೋಗ್ಯ ಇಲಾಖೆ ಜೀಬನ್ನು ತುಂಬಿಸುವ ಕಾರ್ಯದಿಂದ ಹೊರಬರಲಿಲ್ಲವೆಂದು ಜನರು ಆರೋಪಿಸುತಿದ್ದಾರೆ. ಆರೋಗ್ಯಧಿಕಾರಿಗಳು ಕಟ್ಟಡ ಮಾಲಕರಿಂದ ಲಂಚ ಪಡೆದು ಅವರ ಪರವಾಗಿ ಕರ್ತವ್ಯವನ್ನು ದುರುಪಯೋಗಪಡಿಸುತ್ತಿರುವುದಾಗಿ ವ್ಯಾಪಕವಾದ ಆರೋಪಗಳು ಕೇಳಿ ಬಂದಿತ್ತು. ಹಲವಾರು ವರ್ಷಗಳಿಂದ ಮಂಜೇಶ್ವರದಲ್ಲೇ ಇರುವ ಆರೋಗ್ಯಾಧಿಕರಿಯೊಬ್ಬ ರಾಜಕಾರಣಿಗಳ ಪ್ರಭಾವದಿಂದ ವರ್ಗಾವಣೆಯಾಗದೆ ಬಾಕಿ ಉಳಿದಿರುವುದು ಫ್ಲಾಟ್ ಮಾಲಕರಿಗೊಂದು ವರದಾನವಾಗಿರುವುದಾಗಿ ಊರವರು ಹೇಳುತಿದ್ದಾರೆ.ಹಲವು ಸಲ ಆರೋಗ್ಯಾಧಿಕಾರಿಗಳು ಈ ಸ್ಥಳಕ್ಕೆ ಆಗಮಿಸಿ ವಸತಿ ಗೃಹಗಳಿಂದ ಸಾರ್ವಜನಿಕ ಸ್ಥಳಕ್ಕೆ ಹರಿದು ಬರುತ್ತಿರುವ ಕೊಳಚೆ ನೀರುಗಳು ಕಟ್ಟಿ ನಿಂತಿರುವುದನ್ನು ಕಣ್ಣಾರೆ ವೀಕ್ಷಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂಬ ಆರೋಪ ಕೂಡಾ ಕೇಳಿ ಬರುತ್ತಿದೆ.

ಸ್ವಚ್ಚ ಭಾರತ ಎಂದು ಹೇಳುತ್ತಿರುವ ಕೇಂದ್ರ ಸರಕಾರ ಅದೇ ಸ್ವಚ್ಚವನ್ನು ಪಾಲಿಸಲು ತಾಕೀತು ನೀಡುತ್ತಿರುವ ರಾಜ್ಯ ಸರಕಾರ ಅದೇ ಸರಕಾರ ನೇಮಕ ಗೊಳಿಸಿದ ಆರೋಗ್ಯಾಧಿಕಾರಿಗಳು ಇವರೆಲ್ಲಾ ಕಂಡೂ ಕಾಣದ ಜಾಣ ಕುರುಡಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಲಂಚದ ಆರೋಪಕ್ಕೆ ಬಲವಾದ ಪುಷ್ಟಿಯನ್ನು ನೀಡುತ್ತಿರುವುದಾಗಿ ಹಿರಿಯ ನಾಗರಿಕರೊಬ್ಬರು ಹೇಳುತಿದ್ದಾರೆ.

Related posts

Leave a Reply

Your email address will not be published. Required fields are marked *