Header Ads
Header Ads
Breaking News

ಮಂಜೇಶ್ವರದ ರಾ.ಹೆ. ಯಲ್ಲಿ ಹರಿಯುತ್ತಿದ್ದ ನೀರಿಗೆ ತಾತ್ಕಾಲಿಕ ವ್ಯವಸ್ಥೆ. ತೋಡು ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ. ಸ್ವಂತ ಖರ್ಚಿನಲ್ಲಿ ಕಾಮಗಾರಿ ನಡೆಸಿದ ವಾರ್ಡ್ ಸದಸ್ಯ ಮುಕ್ತಾರ್.

ಮಂಜೇಶ್ವರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ತೋಡಿನಿಂದ ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿದು ಹೋಗುತಿತ್ತು. ಈ ಬಗ್ಗೆ v4 ನ್ಯೂಸ್ ಸಮಗ್ರ ವರದಿಯನ್ನು ಬಿತ್ತರಿಸಿತ್ತು. ಇದೀಗ ವಾರ್ಡ್ ಸದಸ್ಯರು ತಮ್ಮ ಸ್ವಂತ ಖರ್ಚಿಯಿಂದ ನೀರು ಹರಿದು ಹೋಗಲು ವ್ಯವಸ್ಥೆಯನ್ನು ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ತೋಡಿನಿಂದ ಬರುತ್ತಿರುವ ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಇಲ್ಲದೆ ರಾಷ್ಟ್ರೀಯ ಹೆದ್ದಾರಿ ಹಾಗೂ ಪರಿಸರಗಳಲ್ಲಿ ನೀರು ಕಟ್ಟಿ ನಿಂತು ರಸ್ತೆಯೇ ತೋಡಾಗುತಿದ್ದರೂ ಈ ತನಕ ಈ ಭಾಗಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಸ್ಥಳೀಯಾಡಳಿತವಾಗಲೀ ಲೋಕೋಪಯೋಗಿ ಇಲಾಖೆಯಾಗಲೀ ಕೈಗೊಳ್ಳದೇ ಇರುವ ಬಗ್ಗೆ ಸ್ಥಳೀಯರ ಹೇಳಿಕೆಯನ್ನು ಆಧರಿಸಿ ಇತ್ತೀಚೆಗೆ v4 ನ್ಯೂಸ್ ಸಮಗ್ರವಾದ ವರದಿಯನ್ನು ಪ್ರಸಾರ ಮಾಡಿತ್ತುಇದಕ್ಕೆ ಸ್ಪಂಧಿಸಿದ ವಾರ್ಡ್ ಸದಸ್ಯ ಮುಕ್ತಾರ್ ಸ್ವಂತ ಕೈಯಿಂದ ಹಣ ಖರ್ಚು ಮಾಡಿ ಸೋಮವಾರದಂದು ಬೆಳಿಗ್ಗೆಯಿಂದ ಸಂಜೆ ತನಕ ಬುಲ್ ಡಜರ್ ಉಪಯೋಗಿಸಿ ನೀರು ಹರಿದು ಹೋಗುವಂತೆ ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.ಇತ್ತೀಚೆಗೆ ಸುರಿದ ಭಾರೀ ಮಳೆಗೆ ಈ ಭಾಗದ ರಾ. ಹೆದ್ದಾರಿ ಸಂಪೂರ್ಣವಾಗಿ ಕುಸಿದು ಹೋಗಿತ್ತು, ಭಾರೀ ಗಾತ್ರದ ಹೊಂಡ ಕೂಡಾ ಸೃಷ್ಟಿಯಾಗಿತ್ತು. ಈ ಕಾರಣದಿಂದ ಒಂದು ಸಣ್ಣ ಮಳೆ ಬಂದರೆ ಗುಂಡಿ ಯಾವುದು ಮಾರ್ಗ ಯಾವುದು ಎಂಬುದನ್ನರಿಯದೆ ವಾಹನಗಳು ಗುಂಡಿಗೆ ಬೀಳುವುದು ಹಾಗೂ ಅಪಘಾತ ಇಲ್ಲಿ ನಿತ್ಯದರ್ಶನಾವಾಗಿರುವ ಬಗ್ಗೆ ಉಲ್ಲೇಖಿಸಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳನ್ನು ಎಚ್ಚೆತ್ತೆಬ್ಬಿಸುವಂತೆ ವರದಿ ಪ್ರಸಾರ ಗೊಂಡಿತ್ತು.ಅಂತೂ ಇದೀಗ ಶಾಶ್ವತ ಪರಿಹಾರವಲ್ಲದಿದ್ದರೂ ತಾತ್ಕಾಲಿಕವಾದ ಪರಿಹಾರವಾದರೂ ಸಿಕ್ಕಿತಲ್ಲವೇ ಎಂಬ ಸಂತೋಷದಲ್ಲಿದ್ದಾರೆ ಸ್ಥಳೀಯರು.

Related posts

Leave a Reply