Header Ads
Header Ads
Breaking News

ಮಂಜೇಶ್ವರದ ಹೊಟೇಲ್‌ಗೆ ಆಕಸ್ಮಿಕವಾಗಿ ಬೆಂಕಿ : ಸುಮಾರು ಒಂದು ಲಕ್ಷ ರೂ. ನಷ್ಟ

ಮಂಜೇಶ್ವರ: ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಿಸುತ್ತಿರುವ ಹೋಟೆಲ್ ಆಕಸ್ಮಿಕವಾಗಿ ಬೆಂಕಿಗಾಹಿತಿಯಾಗಿ ಭಸ್ಮವಾಗಿದೆ. ರಾಮಚಂದ್ರ ಕೋಟ್ಯಾನ್ ಎಂಬವರ ಮಾಲಕತ್ವದಲ್ಲಿರುವ ಆರ್.ಕೆ ಎಂಬ ಹೆಸರಿನಲ್ಲಿ ಕಾರ್ಯಾಚರಿಸುತಿದ್ದ ಹೋಟೆಲ್ ಬೆಂಕಿಗಾಹುತಿಯಾಗಿದೆ. ಸುಮಾರು ಒಂದು ಲಕ್ಷ ರು. ನಷ್ಟ ಉಂಟಾಗಿದೆ. ಇಂದು ಮುಂಜಾನೆ ಹೋಟೆಲ್ ಕಾರ್ಮಿಕ ಆಗಮಿಸಿದಾಗ ಹೋಟೆಲ್‌ನ ಮೇಲ್ಬಾಗದಿಂದ ಹೋಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆತ ಪರಿಸರವಾಸಿಗಳಿಗೆ ಮಾಹಿತಿ ನೀಡಿದಾಗ ಎಲ್ಲರು ಆಗಮಿಸುವಷ್ಟರಲ್ಲಿ ಹೋಟೆಲ್ ಧಗ ಧಗನೆ ಹೊತ್ತಿ ಉರಿದಿದೆ. ಉರಿಯುತ್ತಿರುವ ಬೆಂಕಿ ಸಮೀಪದ ಅಂಗಡಿಗಳಿಗೆ ಪಸರಿಸದ ರೀತಿಯಲ್ಲಿ ಸ್ಥಳೀಯರು ಮುಂಜಾಗ್ರತೆ ವಹಿಸಿದ್ದಾರೆ. ಬಳಿಕ ಅಗ್ನಿಶಾಮಕದಳ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯ ಮಾಡಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದಾಗಿ ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಯೂನಿಯನ್ ನೇತಾರರು ಭೇಟಿ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *