Header Ads
Header Ads
Header Ads
Breaking News

ಮಂಜೇಶ್ವರದ 7 ಸ್ಥಳಗಳಿಗೆ ಹೈಮ್ಯಾಕ್ಸ್ ಬೆಳಕಿನ ಭಾಗ್ಯ ಸ್ಥಳ ಗುರುತಿಸುವ ಕಾರ್ಯ ಪೂರ್ಣ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ

ಮಂಜೇಶ್ವರ ಪರಿಸರದ 7 ಸ್ಥಳಗಳಿಗೆ ಶಾಸಕರ ನಿಧಿಯಿಂದ ಹೈಮ್ಯಾಕ್ಸ್ ಬೆಳಕಿನ ಭಾಗ್ಯ ಮಂಜೂರಾಗಿದೆ. ಮಂಜೇಶ್ವರ ಶಾಸಕ ಪಿ ಬಿ ಅಬ್ದುಲ್ ರಜಾಕ್ ರವರ ನಿಧಿಯಿಂದ ಈ ಮೊದಲು ಹಲವು ಕಡೆಗಳಿಗೆ ಹೈಮ್ಯಾಕ್ಸ್ ಬೆಳಕನ್ನು ಹಾಕಿದ್ದರೂ ಕೆಲವೊಂದು ಪ್ರದೇಶಗಳಲ್ಲಿ ಹಾಕದೇ ಇರುವುದು ಚರ್ಚೆಗಗೆ ಗ್ರಾಸವಾಗುವುದರ ಜೊತೆಗೆ ಶಾಸಕರಿಗೂ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಇದೀಗ ಉಳಿದ ಸ್ಥಳಗಳಿಗೆ ಹೈಮ್ಯಾಕ್ಸ್ ಬೆಳಕಿನ ಭಾಗ್ಯ ದೊರೆತಿದೆ.

ಇದರಂತೆ ಸೋಮವಾರ ಹೈಮ್ಯಾಕ್ಸ್ ಅಳವಡಿಸುವ ಕೆಲಸಕ್ಕೆ ಸಂಬಂಧಪಟ್ಟವರು ಆಗಮಿಸಿ ನಿರ್ಧಿಷ್ಟ ಸ್ಥಳಗಳನ್ನು ಗುರುತಿಸಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಂಡು ಹೈಮ್ಯಾಕ್ಸ್ ಬೆಳಕು ಬರುವ ಸಂತೋಷದಲ್ಲಿದ್ದಾರೆ ಊರಿನ ಜನತೆ.

Related posts

Leave a Reply