Header Ads
Header Ads
Breaking News

ಮಂಜೇಶ್ವರ:ನಿಲ್ಲಿಸಿದ್ದ ಬೊಲೇರೊ ಟೆಂಪೋಗೆ ಆಕಸ್ಮಿಕ ಬೆಂಕಿ

ತಲಪಾಡಿಯ ಮಿಲ್ಮಾ ಡೈರಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೊಲೇರೋ ಟೆಂಪೋದಲ್ಲಿ ಆಕಸ್ಮಿಕ ಬೆಂಕಿ ಉಂಟಾಗಿ ಟೆಂಪೋದ ಒಳ ಭಾಗ ಹಾಗೂ ಇಂಜಿನ್ ಉರಿದು ನಾಶಗೊಂಡ ಘಟನೆ ನಡೆದಿದೆ.ಕೇರಳ ತಲಪಾಡಿ ಬಸ್ಸು ನಿಲ್ದಾಣದ ಹಿಂಬಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮುಸ್ತಫಾ ಉದ್ಯಾವರ ಎಂಬವರ ಮಾಲಕತ್ವದಲ್ಲಿರುವ  ಬೊಲೇರೋ ಟೆಂಪೋ ಬೆಂಕಿಯಿಂದ ಉರಿದು ನಾಶಗೊಂಡಿದೆ.

ಚಾಲಕನ ಮುಂಭಾಗದ ಇಂಜಿನ್ ಹಾಗೂ ಒಳ ಭಾಗ ಸಂಪೂರ್ಣವಾಗಿ ಉರಿದು ನಾಶವಾಗಿದೆ. ಬಳಿಕ ಊರವರು ಹಾಗೂ ಮಂಜೇಶ್ವರ ಪೊಲೀಸರು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಸಮೀಪದಲ್ಲೇ ಮಿಲ್ಮಾ ಹಾಲಿನ ಡೈರಿ ಇದ್ದರೂ ಅಪಾಯಗಳೇನೂ ಸಂಭವಿಸಿಲ್ಲ,. ಬೆಂಕಿ ಉಂಟಾಗುವಾಗ ಚಾಲಕ ವಾಹನದಲ್ಲಿ ಇಲ್ಲದೇ ಇದ್ದದ್ದು ದೊಡ್ಡ ದುರಂತದಿಂದ ಪಾರಾಗಿದೆ.

Related posts

Leave a Reply