Header Ads
Header Ads
Breaking News

ಮಂಜೇಶ್ವರ:ಫೋರಂ ವತಿಯಿಂದ ನಿರ್ಮಿಸಲಾದ ಮದ್ರಸ ಕಟ್ಟಡ ನೂತನ ಮದ್ರಸ ಕಟ್ಟಡ ಕುಂಜತ್ತೂರಿನಲ್ಲಿ ಉದ್ಘಾಟನೆ.

ಕುಂಜತ್ತೂರು ಜಮಾಹತ್ ಸಮಿತಿಯ ನೇತೃತ್ವದಲ್ಲಿ ಕಾರ್ಯಾಚರಿಸಿಕೊಂಡಿರುವ ಮಹ್ ದನುಲ್ ಉಲೂಂ ಮದ್ರಸಕ್ಕೆ ಕುಂಜತ್ತೂರು ಪ್ರವಾಸಿ ಫೋರಂ (ಜಿ ಸಿ ಸಿ) ಯ ವತಿಯಿಂದ ನೂತನವಾಗಿ ನಿರ್ಮಿಸಿ ಕೊಟ್ಟ ಕಟ್ಟಡದ ಉದ್ಘಾಟನೆ ಮಸೀದಿ ಅಂಗಣದಲ್ಲಿ ಭಾರೀ ವಿಜೃಂಭಣೆಯಿಂದ ನಡೆಯಿತು

ಕಟ್ಟಡ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಅಧ್ಯಕ್ಷ ಶೈಖುನಾ ಅಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಘಲ್ ನಿರ್ವಹಿಸಿದರು. ಬಳಿಕ ಸಂಯುಕ್ತ ಜಮಾಹತ್ ಮಂಜೇಶ್ವರದ ಅಧ್ಯಕ್ಷ ಅತ್ತಾವುಲ್ಲ ತಂಘಲ್ ಪ್ರಾರ್ಥಣೆ ನೆರವೇರಿಸಿದರು. ಬಳಿಕ ಮಾತನಾಡಿದ ಜಿಫ್ರಿ ಮುತ್ತು ಕೋಯ ತಂಘಲ್ ರವರು ಪ್ರವಾಸಿಗಳ ಮುತುವರ್ಜಿಯಿಂದ ನಿರ್ಮಿಸಲಾದ ಮದ್ರಸ ಕಟ್ಟಡ ಅಭಿನಂದನೀಯವಾಗಿದೆ. ನಾವು ಈ ರೀತಿಯ ದೀನಿ ಸೇವೆಗೆ ಅಭಿನಂದನೆಯನ್ನು ಸಲ್ಲಿಸ ಬೇಕಾದದ್ದು ಸಮಸ್ತ ಕೇರಳ ಜಂಮೀಯತ್ತುಲ್ ಉಲಮಾ ಸಂಘಟನೆಗಾಗಿದೆ. ಆ ಸಂಘಟನೆಯ ಪ್ರಯತ್ನದಿಂದ ಇಂದು ಕರ್ನಾಟಕದ ಗಡಿ ಪ್ರದೇಶ ಹಾಗೂ ತಮಿಳ್ನಾಡಿನ ಗಡಿ ಪ್ರದೆಶಗಳಲ್ಲಿ ಉತ್ತಮವಾದ ದೀನಿ ವಾತಾವರಣವನ್ನು ನಿರ್ಮಿಸಲು ಆ ಸಂಘಟನೆಗೆ ಸಾಧ್ಯವಾಗಿದೆ ಈ ನಿಟ್ಟಿನಲ್ಲಿ ಇನ್ನು ಮುಂದಕ್ಕೂ ನಿಮ್ಮೆಲ್ಲರ ಸಹಕಾರ ಅತೀ ಅಗತ್ಯ ವೆಂದು ಹೇಳಿದರು.

ಬಳಿಕ ಜಮಾಹತ್ ಅಧ್ಯಕ್ಷ ಡಾಕ್ಟರ್ ಕೆ ಎ ಖಾದರ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕುಂಜತ್ತೂರು ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಆಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು ಗಲ್ಫ್ ರಾಷ್ಟ್ರಗಳಲ್ಲಿರುವ ಊರಿನ ಪ್ರವಾಸಿಗಳ ಸಹಕಾರವೇ ಇಂದು ಮಸೀದಿ ಕಟ್ಟಡಗಳ ನಿರ್ಮಾಣಕ್ಕೆ ಪ್ರಮುಖ ಸಹಕಾರಿಯಾಗುತ್ತಿದೆ. ಆದರೆ ಇಂದು ಗಲ್ಫ್ ರಾಷ್ಟ್ರದಲ್ಲಿರುವವರು ಅತೀ ಹೆಚ್ಚಿನ ಸಮಸ್ಯೆಗಳನ್ನು ಕೂಡಾ ಅನುಭವಿಸುತಿದ್ದಾರೆ. ಆದರೂ ಇಂತಹ ಪುಣ್ಯ ಕಾರ್ಯಗಳಿಗೆ ಮುತುವರ್ಜಿ ವಹಿಸುತ್ತಿರುವುದರಿಂದ ದೇವರು ಅವರನ್ನು ಎಲ್ಲಾ ಕಷ್ಟಗಳಿಂದಲೂ ದೂರ ಮಾಡುವನು. ಪ್ರವಾಸಿಗಳು ನಿರ್ಮಿಸಿದ ಈ ಮದ್ರಸ ಕಟ್ಟಡಕ್ಕೆ ದೇವರು ತಕ್ಕದಾದ ಪ್ರತಿಫಲವನ್ನು ನೀಡಿ ಅನುಗ್ರಹಿಸಲಿ ಎಂದು ಹೇಳಿದರು.

ಬಳಿಕ ವೇದಿಕೆಯಲ್ಲಿ ಜಿಫ್ರಿ ಮುತ್ತು ಕೋಯ ತಂಘಲ್, ತ್ವಾಖಾ ಆಹ್ಮದ್ ಮುಸ್ಲಿಯಾರ್, ಅತಾವುಲ್ಲ ತಂಘಲ್, ಕುಂಜತ್ತೂರು ಖತೀಬ್ ಹಾಶಿರ್ ಅಲ್ ಹಾಮಿದಿಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಮೊಯ್ದೀನ್ ಕುಂಞಿ ಹಾಜಿ ಪ್ರಿಯಾ, ಇಬ್ರಾಹಿಂ ಹಾಜಿ ಕೆ ಎ, ಸಯ್ಯದ್ ಎಂ ಕೆ. ಎ ಆರ್ ಅಬ್ದುಲ್ ರಹ್ಮಾನ್ ಹಾಜಿ, ಕೆ ಕೆ ಮೊಹಮ್ಮದ್ ಫೈಝಿ, ತೌಸೀಫ್ ಆಹ್ಮದ್ ಹನೀಫಿ, ವಿವಿಧ ಜಮಾಹತ್ ಸಮಿತಿಯ ಅಧ್ಯಕ್ಷರುಗಳು, ಖತೀಬುಗಳು ಸೇರಿದಂತೆ ಹಲವಾರು ಗಣ್ಯರು ಉಪಸ್ಥರಿದ್ದರು.

ಬಳಿಕ ಮಗ್ರಿಬ್ ನಮಾಜಿನ ನಂತ್ರ ಅಬೂಬಕ್ಕರ್ ಸಿದ್ದೀಖ್ ಅಝ್ ಹರಿ ಪಯ್ಯನ್ನೂರು ಇವರಿಂದ ಮುಖ್ಯ ಪ್ರಭಾಷಣ ನಡೆಯಿತು. ಬಳಿಕ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡರು.

Related posts

Leave a Reply