Header Ads
Header Ads
Breaking News

ಮಂಜೇಶ್ವರ:ಬೈಕ್ ಮತ್ತು ಕಾರು ನಡುವೆ ಢಿಕ್ಕಿ

ಮಂಜೇಶ್ವರ; ಬೈಕಿಗೆ ಕಾರೊಂದು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಬೈಕಿನಲ್ಲಿ ಸಂಚರಿಸುತಿದ್ದ ತಂದೆ ಹಾಗೂ ಪುತ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆತೂಮಿನಾಡು ಐಸ್ ಕ್ರೀಂ ಕಾರ್ಖಾನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

 

ಕಲ್ಲಾಪು ನಿವಾಸಿ ಹಾಗೂ ಕುಂಜತ್ತೂರು ಫರ್ನೀಚರ್ ಅಂಗಡಿಯೊಂದರಲ್ಲಿ ಕೆಲಸಕ್ಕಿರುವ ವಿಲ್ಸನ್ ಫೆರ್ನಾಂಡೀಸ್ (52) ಹಾಗೂ ಅವರ ಪುತ್ರ ಅಲ್ವಿನ್ (18) ಅಪಘಾತದಿಂದ ಗಾಯಗೊಂಡಿದ್ದಾರೆ. ಇವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಪಘಾತದಿಂದ ಬೈಕ್ ಹಾಗು ಕಾರಿನ ಮುಂಬಾಗ ಹಾನಿಗೀಡಾಗಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.

Related posts

Leave a Reply