Header Ads
Header Ads
Breaking News

ಮಂಜೇಶ್ವರ:ಭ್ರಷ್ಟಾಚಾರದ ವಿರುದ್ದ ಕೇರಳ ಯಾತ್ರೆ,ಎಂ.ಎಂ ಪೌಲೋಸ್ ಅವರಿಂದ ಜಾಗೃತಿ

ಮಂಜೇಶ್ವರ: ಕೇರಳವನ್ನು ಸರ್ವ ನಾಶದತ್ತ ಕೊಂಡೊಯ್ಯುತ್ತಿರುವ ಭ್ರಷ್ಟಾಚಾರದ ಎಂಬ ಪಿಡುಗು ಕ್ಯಾನ್ಸರ್ ರೀತಿಯಲ್ಲಿ ರಾಷ್ಟ್ರ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ಹತ್ತಿಕ್ಕುವ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತರಾದ ಎಂ.ಎಂ ಪೌಲೋಸ್ ಎಂಬವರು ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಿಂದ ತಿರುವನಂತಪುರದ ಕಳಿಯಂಕೋವಿಲ ತನಕ ಭೃಷ್ಟಾಚಾರದ ವಿರುದ್ದ ಕೇರಳ ಯಾತ್ರೆಯನ್ನು ಆರಂಭಿಸಿದ್ದಾರೆ.ಭ್ರೃಷ್ಟಾಚಾರದ ವಿರುದ್ದ ಇವರು ಕೇರಳ ರಾಜ್ಯಕ್ಕೆ ನಡೆಸುತ್ತಿರುವ ಎರಡನೇ ಯಾತ್ರೆಯಾಗಿದೆ ಇದು. ಕಳೆದ ವರ್ಷ ಕೂಡಾ ಇದೇ ವ್ಯಕ್ತಿ ಏಕಾಂಗಿಯಾಗಿ ಈ ಯಾತ್ರೆಯನ್ನು ಇವರು ಪೂರ್ತಿಗೊಳಿಸಿದ್ದಾರೆ. 85 ವರ್ಷ ಪ್ರಯವಿರುವ ಈ ವ್ಯಕ್ತಿ ಭ್ರಷ್ಟಾಚಾರದ ವಿರುದ್ದ ನನ್ನ ಯುದ್ದವಾಗಿರುವುದಾಗಿ ಹೇಳುತಿದ್ದಾರೆ.ಗುರುವಾರದಂದು ಬೆಳಿಗ್ಗೆ ತಲಪಾಡಿಯಲ್ಲಿ ನಡೆದ ಕೇರಳ ಯಾತ್ರಾ ಕಾರ್ಯಕ್ರಮಕ್ಕೆ ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಂದಿನ ಯುಗದಲ್ಲಿ ಪ್ರತಿಯೊಂದು ಇಲಾಖೆಯಲ್ಲೂ ಲಂಚ ಹಾಗೂ ಭೃಷ್ಟಾಚಾರ ತಾಂಡವಾಡುತ್ತಿದೆ. ಇದನ್ನು ಹತ್ತಿಕ್ಕಲು ತನ್ನ ಮುದಿ ವಯಸ್ಸಿನಲ್ಲಿ ಭೃಷ್ಟಾಚಾರ ವಿರುದ್ದ ಯುದ್ದಕ್ಕೆ ಇಳಿದಿರುವ ಎಂ ಎಂ ಪೌಲೋಸ್ ರವರ ಈ ಹೋರಾಟವನ್ನು ಮೆಚ್ಚಲೇ ಬೇಕಾಗಿದೆ ಎಂದು ಹೇಳಿ ಪೌಲೋಸ್ ರವರ ಕೇರಳ ಯಾತ್ರೆಗೆ ಶುಭವನ್ನು ಹಾರೈಸಿದರು.

ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮುಸ್ತಫ ಉದ್ಯಾವರ ಡಾ. ಕೆ ಎ ಖಾದರ್, ಕೃಷ್ಣಪ್ಪ, ಸೋಮಶೇಖರ, ಸಿ ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply