Header Ads
Header Ads
Breaking News

ಮಂಜೇಶ್ವರ: ಅಪಾಯ ಭೀತಿಯಲ್ಲಿರುವ ಬೃಹತ್ತಾಕಾರದ ಮರ

ಮಂಜೇಶ್ವರ ಸಂಧ್ಯಾ ಗ್ಯಾರೇಜ್ ರಾಷ್ಟ್ರೀಯ ಹೆದ್ದಾರಿ ಮದಿಯಲ್ಲಿ ಬೃಹತಾಕಾರದ ಮರವೊಂದು ಒಂದು ಗಾಳಿ ಬೀಸಿದರೆ ಬೀಳುವಂತಹ ಅಪಯದ ಸ್ಥಿತಿಯಲ್ಲಿದೆ. ಈ ಬಗ್ಗೆ ಊರವರು ಸಂಬಂಧಪಟ್ಟವರಲ್ಲಿ ಹಲವಾರು ಸಲ ಹೇಳಿದ್ದರೂ ಯಾರೂ ಇತ್ತ ಕಡೆ ತಿರುಗಿಯೂ ನೋಡಿಲ್ಲ ಎಂಬ ಅರೋಪ ಕೇಳಿ ಬಂದಿದೆ.

ಸುಮಾರು60 ವರ್ಷಕ್ಕಿಂತಲೂ ಮಿಕ್ಕ ಪುರಾತನಾವಾಗಿರುವ ಅಪಾಯದಂಚಿನಲ್ಲಿರುವ ಮರವನ್ನು ಕಡಿದು ತೆರವು ಗೊಳಿಸುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಸಲ ದೂರವಾಣಿ ಮೂಲಕವೂ ಲಿಖಿತವಾಗಿಯೂ ದೂರುಗಳನ್ನು ನೀಡಿದರೂ ಇನ್ನು ಎಚ್ಚೆತ್ತುಗೊಳ್ಳದೇ ಇರುವುದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಇದರ ಒಂದು ಭಾಗ ಕೆಲ ದಿನಗಳ ಹಿಂದೆ ಮುರಿದು ಬಿದ್ದಿದ್ದು, ಈ ಸಂದರ್ಭ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲವಾಗಿರುವುದರಿಂದ ಭಾರೀ ಒಂದು ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗಿತ್ತು. ಉಳಿದ ಭಾಗ ಇದೀಗ ಒಂದು ಗಾಳಿ ಬೀಸಿದರೆ ಬೀಳಬಹುದಾಗಿದೆ. ಇದರ ಅಡಿಭಾಗದಿಂದ ವಿದ್ಯುತ್ ತಂತಿಗಳು ಕೂಡಾ ಹಾದು ಹೋಗಿವೆ. ಅಕಸ್ಮಾತ್ ಬಿದ್ದರೆ ಅಪಾಯ ತಪ್ಪಿದ್ದಲ್ಲ.

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮರಗಳನ್ನು ತೆಗೆಯಬೇಕಾದರೆ ಅರಣ್ಯ ಇಲಾಖೆಯವರು ಹಾಗೂ ರಾ. ಹೆದ್ದಾರಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.

Related posts

Leave a Reply

Your email address will not be published. Required fields are marked *