Header Ads
Header Ads
Breaking News

ಮಂಜೇಶ್ವರ: ಅರಬ್ ರೈಡರ್ಸ್ ತಂಡದಿಂದ ಬೃಹತ್ ರಕ್ತದಾನ ಶಿಬಿರ

ತೂಮಿನಾಡು ಅರಬ್ ರೈಡರ್ಸ್ ತಂಡದಿಂದ ಬೃಹತ್ ರಕ್ತದಾನ ಶಿಬಿರ ನಡೆಯಿತು. ಸ್ಥಳೀಯ ಯುವಕರನ್ನು ಒಟ್ಟುಗೂಡಿಸಿ ಮೊದಲ ಬಾರಿಗೆ ರಕ್ತದಾನ ಶಿಬಿರವನ್ನು ನಡೆಸಿ ಮುಂದಿನ ದಿನಗಳಲ್ಲಿ ರಕ್ತದ ಕೊರತೆಯಿಂದ ಬಳಲುತ್ತಿರುವವರಿಗೆ ರಕ್ತವನ್ನು ನೀಡಿ ಬಡಪಾಯಿಗಳ ಜೀವವನ್ನು ಉಳಿಸಲು ಪ್ರತಿಜ್ಞೆಯನ್ನು ಸ್ವೀಕರಿಸಿದೆ.

ತೂಮಿನಾಡು ಸಿರಾಜುಲ್ ಇಸ್ಲಾಂ ಮದ್ರಸದಲ್ಲಿ ಕ್ಲಬ್ ಅಧ್ಯಕ್ಷ ಯಯ್ಯಾರವರ ಅಧ್ಯಕ್ಷತೆಯಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಅರಬ್ ರೈಡರ್ಸ್ ಎಂಬ ಹೆಸರು ಕೇಳುವಾಗ ನನಗೆ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ನೆನಪು ಬರುತ್ತಿದೆ. ಕ್ರಿಡೆಯ ಜೊತೆಯಾಗಿ ಸಾಮಾಜಿಕ ಜೀವ ಕಾರುಣ್ಯ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಅರಬ್ ರೈಡರ್ಸ್ ತಂಡದ ಸೇವೆ ಶ್ಲಾಘನೀಯವಾಗಿದೆ ಎಂಬುದಾಗಿ ಹೇಳಿದರು.

ವೇದಿಕೆಯಲ್ಲಿ ವೈದ್ಯರುಗಳಾದ ಜಯಪಾಲ ಶೆಟ್ಟಿ, ಕಾದರ್ ಎ, ಬ್ಲೋಕ್ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫ ಉದ್ಯಾವರ, ಅಲ್ ಫತಾಃ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ, ಮಸೀದಿ ಖತೀಬ್ ಅಬ್ದುಲ್ ರಹ್ಮಾನ್ ಹರ್ಶಿದಿ,ಸಿದ್ದೀಖ್ ತಂಘಲ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply