Header Ads
Header Ads
Breaking News

ಮಂಜೇಶ್ವರ ಆರೆಸ್ಸೆಸ್ ಇಫ್ತಾರ್‌ನಲ್ಲಿ ಎಂಟು ಜನ, ವಿರೋಧಿ ಇಫ್ತಾರ್‌ನಲ್ಲಿ ನೂರಾರು ಜನ


ಮಂಜೇಶ್ವರ:ಪ್ರತಿಭಟನೆ, ಬಹಿಷ್ಕಾರಗಳ ಮಧ್ಯೆ ಭಾರೀ ಪೊಲೀಸ್ ಬಂದೋಬಸ್ತ್ ನಲ್ಲಿ ರಾಷ್ಟ್ರೀಯ ಮುಸ್ಲಿಂ ಮಂಚ್ ನ ಇಫ್ತಾರ್ ಕೂಟ
ಆರೆಸ್ಸೆಸ್‌ನ ಪೋಷಕ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್‌ನ್ನು ಮುಂದಿಟ್ಟುಕೊಂಡು ಮಂಜೇಶ್ವರ ಹೊಸಂಗಡಿಯಲ್ಲಿ ಏರ್ಪಡಿಸಲಾದ ರಾಜ್ಯ ಮಟ್ಟದ ಇಫ್ತಾರ್ ಕೂಟ ಭಾರೀ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಯಿತು.
ಇಫ್ತಾರ್ ಕೂಟಕ್ಕೆ ವಿರುದ್ದವಾಗಿ ಮುಸ್ಲಿಂ ಸಂಘಟನೆಗಳ ಭಾಗದಿಂದ ಬಹಿಷ್ಕಾರ ಕಂಡು ಬಂದ ಹಿನ್ನೆಲೆಯಲ್ಲಿ ಶಾಂತಿ ಸಮಾಧಾನವನ್ನು ಕಾಪಾಡುವ ನಿಟ್ಟಿನಲ್ಲಿ ಕುಂಬಳೆ ವೃತ್ತ ನಿರೀಕ್ಷಕ ಹಾಗೂ ಮಂಜೇಶ್ವರ ಠಾಣಾಧಿಕಾರಿಯವರ ನೇತೃತ್ವದಲ್ಲಿ ಹಿಲ್ ಸೈಡ್ ಅಡಿಟೋರಿಯಂ ಮುಂಬಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇಫ್ತಾರ್ ಕೂಟಕ್ಕೆ ಆಗಮಿಸುವರೆಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಸುರೇಂದ್ರನ್ ಸೇರಿದಂತೆ ಹಲವು ನೇತಾರರು ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ಉದ್ಘಾಟನೆಗಾಗಿ ಆಗಮಿಸುವುದಾಗಿ ತಿಳಿಸಿದ್ದ ಕೇಂದ್ರ ವಖ್ಪ್ ಬೋರ್ಡ್ ಸದಸ್ಯ ನ್ಯಾಯವಾದಿ ನೌಷಾದ್ ಪತ್ತಣಂತಿಟ್ಟ ಕೂಡಾ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕೃತವಾದ ಉದ್ಘಾಟನಾ ಕಾರ್ಯಕ್ರಮವನ್ನು ಉಪೇಕ್ಷಿಸಿ ಇಫ್ತಾರ್ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು.
ಇಫ್ತಾರ್ ಕೂಟವನ್ನು ವರದಿ ಮಾಡಲು ತೆರಳಿದ ಎಂಟು ವರದಿಗಾರರ ಸಹಿತ ಇಪ್ಪತೈದು ಮಂದಿ ಮಾತ್ರ ಕಾರ್ಯಕ್ರಮದಲ್ಲಿ ಕಂಡು ಬಂದರು. ಮುಸ್ಲಿಂ ರಾಷ್ಟ್ರೀಯ ಮಂಚ್ ರಾಜ್ಯ ಕಾರ್ಯದರ್ಶಿ ಡಾ. ಉಮ್ಮರ್ ಫಾರೂಕ್, ರಿನಾಝ್ ಎರ್ನಾಕುಳಂ, ರಾಜ್ಯ ಕೋಶಾಧಿಕಾರಿ ರಿಯಾಝ್ ಅಬ್ದುಲ್ಲ, ಜಿಲ್ಲಾಧ್ಯಕ್ಷ ಮುನೀರ್ ಉಪ್ಪಳ, ಸುಮ ಕೋದಮಂಗಳಂ, ಹನೀಫ ಇಚ್ಲಂಗೋಡ್, ಸಿರಾಜ್ ಹೈಗ್ಲೋದಿ, ಬಿಜೆಪಿ ವಲಯ ಕಾರ್ಯದರ್ಶಿ ಆದರ್ಶ್, ನೇತಾರರಾದ ಪದ್ಮನಾಭ ಕಡಪ್ಪುರ, ಹರೀಶ್ಚಂದ್ರ, ಆರೆಸ್ಸಸ್ ವಲಯ ಕಾರ್ಯನಿರ್ವಾಹಕ ವೀರಪ್ಪ ಅಂಬಾರ್, ಮೊದಲಾದವರು ಕಾರ್ಯಕ್ರಮದಲ್ಲಿ ಕಂಡು ಬಂದರು. ಇಫ್ತಾರ್ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ವಿವಿಧ ಮುಸ್ಲಿಂ ಸಂಘಟನೆಗಳು, ರಾಜಕೀಯ ಪಕ್ಷಗಳು ರಂಗಕ್ಕಿಳಿದಿದ್ದವು. ಇದರ ಹೊರತಾಗಿ ಎಸ್ ಡಿ ಪಿ ಐ, ಯೂತ್ ಲೀಗ್, ಪಿಡಿಪಿ ಮೊದಲಾದವರು ವಿರೋಧ ವ್ಯಕ್ತ ಪಡಿಸಿ ರಂಗಕ್ಕಿಳಿದಿದ್ದರು. ಕೆಲವು ಮುಸ್ಲಿಂ ಲೀಗ್ ನೇತಾರರಿಗೆ, ಕಾಂಗ್ರೆಸ್, ಎಡರಂಗದ ನೇತಾರರಿಗೂ ಆಹ್ವಾನ ನೀಡಲಾಗಿತ್ತು. ಅದರೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲವೆಂಬುದಾಗಿ ಎಲ್ ಡಿ ಎಫ್ ಕನ್ವೀನರ್ ಬಿ. ವಿ. ರಾಜನ್ ಮೊದಲೇ ಹೇಳಿಕೆ ನೀಡಿದ್ದರು.

ರಾಷ್ಟ್ರೀಯ ಮಂಚ್ ಇಫ್ತಾರ್ ಸಂಗಮಕ್ಕೆ ವಿರೋಧವಾಗಿ ಹೊಸಂಗಡಿಯಲ್ಲಿ ಮುಸ್ಲಿಂ ಐಕ್ಯ ವೇದಿಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು. ಇಫ್ತಾರ್ ಕೂಟದಲ್ಲಿ ನೂರಾರು ಮಂದಿ ಮುಸಲ್ಮಾನರು ಪಾಲ್ಗೊಂಡರು.

Related posts

Leave a Reply