Header Ads
Header Ads
Breaking News

ಮಂಜೇಶ್ವರ ಉಪಚುನಾವಣೆಯ ಫಲಿತಾಂಶ ಪ್ರಕಟ : ಯುಡಿಎಫ್ ಅಭ್ಯರ್ಥಿಗೆ ಭರ್ಜರಿ ಜಯ

ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರೀ ವಿಧಾನಸಭೆ ಪ್ರವೇಶಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ರವೀಶ್ ತಂತ್ರಿ ಕುಂಟಾರು ಅವರನ್ನು 7,923 ಮತಗಳ ಅಂತರದಿಂದ ಸೋಲಿಸಿದ ಖಮರುದ್ದೀನ್, ಎಲ್‌ಡಿಎಫ್ ಅನ್ನು ಮತ್ತೊಮ್ಮೆ ತೃತೀಯ ಸ್ಥಾನಕ್ಕೆ ತಳ್ಳಿದ್ದಾರೆ. ಆರಂಭದಲ್ಲೇ ಮುನ್ನಡೆ ಸಾಧಿಸಿದ್ದ ಖಮರುದ್ದೀನ್ ಕೊನೆಯವರೆಗೂ ಅದನ್ನು ಕಾಯ್ದುಕೊಂಡರಲ್ಲದೇ, ಹಂತ ಹಂತವಾಗಿ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದರು. ಅಂತಿಮವಾಗಿ 65,407  ಮತಗಳನ್ನು ಗಳಿಸುವ ಮೂಲಕ 7,923 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ರವೀಶ್ ತಂತ್ರಿ 57,484 ಮತಗಳನ್ನು ಗಳಿಸಿದ್ದರೆ, ಎಲ್‌ಡಿಎಫ್ ಅಭ್ಯರ್ಥಿ ಎಂ.ಶಂಕರ ರೈ 38,233 ಮತಗಳೊಂದಿಗೆ ತೃತೀಯ ಸ್ಥಾನಿಯಾದರು.

Related posts

Leave a Reply

Your email address will not be published. Required fields are marked *