Header Ads
Header Ads
Breaking News

ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವಕ್ಕೆ ವಿದ್ಯುಕ್ತ ತೆರೆ

 ಕಳೆದೆರಡು ದಿನಗಳಿಂದ ಮಂಜೇಶ್ವರ ಎಸ್‌ಎಟಿ ಶಾಲೆಯಲ್ಲಿ ನಡೆಯುತಿದ್ದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭವು ಶಾಲಾ ಬಯಲು ರಂಗ ಮಂದಿರದಲ್ಲಿ ಜರುಗಿತು.ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಶಾಲಾ ಪ್ರಾಂಶುಪಾಲರಾದ ಶ್ರೀ ಮುರಳೀಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಜೇಶ್ವರ ಉಪ ಜಿಲ್ಲೆಯ ಸಹಾಯಕ ವಿದ್ಯಾಧಿಕಾರಿ ಶ್ರೀ ದಿನೇಶ.ವಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಹಲ ಉತ್ತಮವಾದ ಸ್ಸಜ್ಜಿತವಾದ ರೀತಿಯಲ್ಲಿ ಈ ಸಲದ ಕಲೋತ್ಸವ ಸಮಾಪ್ತಿಗೊಂಡಿದೆ ಎಂದು ಹೇಳಿದ ಅವರು ಕಲೋತ್ಸವದ ಯಶಸ್ಸಿಗೆ ಕಾರಣೀಭೂತರಾದವರನ್ನು ಸ್ಮರಿಸಿ, ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಸರ್ವಿಸ್ ಕೊ ಓಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಬಿ.ಎಂ. ಅನಂತ,.ಶಾಲಾ ಪ್ರಭಂದಕರಾದ ಶ್ರೀ.ಎಮ್ ಕೃಷ್ಣ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಬ್ದುಲ್ ಬಶೀರ್.ಬಿ ವೇದಿಕೆಯಲ್ಲಿ ಎಸ್.ಎ.ಟಿ ಎಲ್.ಪಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ತೇಜಸ್ ಕಿರಣ್, ಎಚ್.ಎಂ ಫಾರ್ಮಿನ ಶ್ರೀ ಆದಿನಾರಾಯಣ ಭಟ್ ಉಪಸ್ಥಿತರಿದ್ದರು.

Related posts

Leave a Reply