Header Ads
Breaking News

ಮಂಜೇಶ್ವರ ಉಪ ನೋಂದಣಿ ಕಚೇರಿ ನೂತನ ಕಟ್ಟಡ ಫೆ.27ಕ್ಕೆ ಸ್ಥಳಾಂತರ

ಮಂಜೇಶ್ವರ: ಮಂಜೇಶ್ವರ ಉಪನೋಂದಣಿ ಕಚೇರಿ ನಾಳೆ ಗುರುವಾರ ಫೆ.27ಕ್ಕೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿರುವುದಾಗಿ ಮಂಜೇಶ್ವರ ಬ್ಲಾಕ್ ಪಂ.ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ರಾಜ್ಯೋದಯಕ್ಕೆ ಮುನ್ನವೇ ಚಟುವಟಿಕೆ ಆರಂಭಿಸಿದ್ದ ಮಂಜೇಶ್ವರ ಉಪ ನೋಂದಣಿ ಕಚೇರಿ ಅಪೂರ್ವ ಸಾಧನೆಗಳನ್ನು ನಡೆಸಿದೆ. 1884 ಮೇ ತಿಂಗಳಿಂದ ಈ ಕಚೇರಿ ಚಟುವಟಿಕೆ ನಡೆಸಿಕೊಂಡು ಬಂದಿದೆ. ಬ್ರಿಟೀಷ್ ಆಡಳಿತೆ ಅವಧಿಯಲ್ಲಿ ವಿದೇಶಿ ನಿರ್ಮಾಣ ಶೈಲಿಯಲ್ಲಿ ಸಿದ್ಧವಾದ ಕಟ್ಟಡದಲ್ಲಿ 136 ವರ್ಷಗಳ ಕಾಲ ಈ ಕಚೇರಿ ಚಟುವಟಿಕೆ ನಡೆಸಿಕೊಂಡುಬಂದಿದೆ. ಎರಡು ಸಾಲು ಕಲ್ಲುಗಳಿಂದ ಕಟ್ಟಡಲಾದ ಗೋಡೆಯೊಂದಿಗೆ ನಿರ್ಮಿಸಲಾದ ಈ ಕಟ್ಟಡಕ್ಕೆ ಇಂದಿಗೂ ಹೇಳುವಂಥಾ ಯಾವುದೇ ಶಿಥಿಲತೆ ಬಂದಿಲ್ಲ. ಫ್ಯಾನ್ ಅನುಷ್ಠಾನಕ್ಕೆ ಬರುವ ಮುನ್ನ ಬಳಕೆಯಲ್ಲಿದ್ದ ತೂಗಿ ಹಾಕಲಾಗುವ ಬೀಸಣಿಕೆಗಾಗಿ ಬಳಸುವ ಕೊಂಡಿ ಇಂದಿಗೂ ಈ ಕಚೇರಿಯಲ್ಲಿದೆ. ಇಲ್ಲಿನ 98 ಸೆಂಟ್ಸ್ ಜಾಗದಲ್ಲಿ ಅನೇಕ ಔಷಧ ಸಸ್ಯಗಳನ್ನು ನೆಟ್ಟು ಬೆಳೆಸಲಾಗಿದೆ. ಜೊತೆಗೆ 98 ಸೆಂಟ್ಸ್ ಜಾಗ ಹೊಂದಿರುವ ರಾಜ್ಯದ ಅತ್ಯಪೂರ್ವ ನೋಂದಣಿ ಕಚೇರಿಗಳಲ್ಲಿಇದೂ ಒಂದು ಎಂಬುದೂ ಹೆಗ್ಗಳಿಕೆಯಾಗಿದೆ.

 

ಕೇರಳ ಲೋಕೋಪಯೋಗಿ ಸಚಿವ ಜಿ ಸುಧಾಕರನ್ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಎಂ ಸಿ ಖಮರುದ್ದೀನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಈ ಸಂದರ್ಭ ವಿವಿಧ ಸ್ಥಲೀಯಾಡಳಿತ ಸಂಸ್ಥೆಗಳ ಅಧ್ಯಕ್ಷರುಗಳು, ಇತರ ಜನಪ್ರತಿನಿಧಿಗಳು, ವಿವಿಧ ರಜಕೀಯ ಪಕ್ಷಗಳ ನೇತರರು , ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರುವರು.

 

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಜನರಿಗೆ ಸೇವೆ ಒದಗಿಸುವಲ್ಲಿ ಹಿಂದಿನ ಕಚೇರಿ ಸಾಲದೇ ಹೋದ ಹಿನ್ನೆಲೆಯಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಹಳೆಯ ಕಟ್ಟಡ ಬಳಿಯೇ ನೂತನ ಕಟ್ಟಡದ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಅಳವಡಿಸಿ 64.66 ಲಕ್ಷ ರೂ. ವೆಚ್ಚಮಾಡಲಾಗಿರುವುದಾಗಿ ಅವರು ತಿಳಿಸಿದರು.

 

ಪತ್ರಿಕಾ ಗೋಷ್ಟಿಯಲ್ಲಿ ಗ್ರಾ. ಪಂ. ಅಧ್ಯಕ್ಷ ಅಝೀಝ್ ಹಾಜಿ, ಪಂ. ಸದಸ್ಯ ಕೆ ಎಂ ಕೆ ಅಬ್ದುಲ್ ರಹ್ಮಾನ್ ಹಾಜಿ, ಕಚೇರಿ ಅಧಿಕಾರಿಗಳಾದ ಪಿ ಚಂದ್ರ, ಜೋರ್ಜ್ ಪೀಟರ್, ರೋಬಿನ್ ಡಿ ಸಿಲ್ವ ಮೊದಲಾದವರು ಉಪಸ್ಥರಿದ್ದರು.

Related posts

Leave a Reply

Your email address will not be published. Required fields are marked *