Header Ads
Header Ads
Breaking News

ಮಂಜೇಶ್ವರ ಎಸ್‍ಎಟಿ ಶಾಲೆಯಲ್ಲಿ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ

ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ 2018 ರ ಸಾಲಿನ ಶಾಲಾ ಕಲೋತ್ಸವದ ವೇದಿಕೆಯೇತರ ಸ್ಪರ್ಧೆಗಳಿಗೆ ಮಂಜೇಶ್ವರ ಎಸ್ ಎ ಟಿ ಶಾಲೆಯಲ್ಲಿ ಚಾಲನೆ ದೊರಕಿತು.ಹೈಸ್ಕೂಲ್ ಹಾಗೂ ಹೈಯರ್ ಸೆಕಂಡರಿ ವಿಭಾಗಗಳ ಸಂಸ್ಕೃತ, ಕನ್ನಡ, ಅರೆಬಿಕ್, ಉರ್ದು ಹಾಗೂ ಡ್ರಾಯಿಂಗ್ ಕತೆ, ಕವಿತೆ, ಪ್ರಬಂಧ, ಡ್ರಾಯಿಂಗ್, ಆಯಿಲ್ ಪೈಂಟಿಂಗ್, ಕಾರ್ಟೂನ್ ಇತರ ಸ್ಪರ್ಧೆಗಳು ವಿವಿಧ ವೇದಿಕೆಗಳಲ್ಲಿ ಜರಗಿತು.


ಈ ಸ್ಪರ್ಧೆಗಳಲ್ಲಿ ಉಪಜಿಲ್ಲಾ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಆಗಮಿಸಿದ ಸುಮಾರು 300 ಕ್ಕಿಂತಲೂ ಮಿಕ್ಕ ವಿದ್ಯಾರ್ಥಿಗಳು ಭಾಗವಹಿಸಿದರು.ರಾಜ್ಯದಲ್ಲಿ ಪ್ರಳಯ ಸಂಭವಿಸಿರುವ ಹಿನ್ನೆಲೆಯಲ್ಲಿ ಶಾಲಾ ಕಲೋತ್ಸವನ್ನು ಸರಳ ರೀತಿಯಲ್ಲಿ ಆಚರಿಸುವಂತೆ ಸರಕಾರ ನಿರ್ಧೇಶಿಸಿದೆ. ಸ್ಪರ್ಧೆಯಲ್ಲಿ 25 ಹೈಸ್ಕೂಲ್ ಹಾಗೂ 17 ಹೈಯರ್ ಸೆಕಂಡರಿ ವಿದ್ಯಾರ್ಥಿಗಳು ಪಾಲ್ಗೊಂಡರು. ನವೆಂಬರ್ ತಿಂಗಳು 15 ಹಾಗೂ 16 ದಿನಾಂಕಗಳಲ್ಲಿ ಇದೇ ಶಾಲೆಯಲ್ಲಿ ನಾಡೋಡಿ ನೃತ್ಯ, ನೃತ್ಯ ಸಂಗೀತ, ಕಥಕ್ಕಳಿ, ಯಕ್ಷಗಾನ, ಮಾಪ್ಪಿಳಪ್ಪಾಟ್, ಒಪ್ಪನ , ನಾಟಕ ಸೇರಿದಂತೆ ವಿವಿಧ ವೇದಿಕೆ ಸ್ಪರ್ಧೆಗಳು ನಡೆಯಲಿವೆ.

Related posts

Leave a Reply