Header Ads
Breaking News

ಮಂಜೇಶ್ವರ: ಐದು ಮಂದಿಯ ತಂಡವೊಂದು ಜರ್ಮನ್ ಪ್ರಜೆಗಳಿಗೆ ಮಾಡಿದ್ದೇನು ಗೊತ್ತೇ?

ಮಂಜೇಶ್ವರ: ಜರ್ಮನ್ ಪ್ರಜೆಗಳು ಗೋವಾದಿಂದ ಎರ್ನಾಕುಳಂ ಕಡೆ ಓಮ್ನಿ ವ್ಯಾನ್‌ನಲ್ಲಿಪ್ರಯಾಣಿಸುತ್ತಿದ್ದು, ಇದೇ ವೇಳೆ ಹೊಸಂಗಡಿಯಲ್ಲಿ ಐದು ಮಂದಿಯ ತಂಡ ತಡೆದು ನಿಲ್ಲಿಸಿ ಹಣ ದರೋಡೆ ಮಾಡಿದ ಘಟನೆ ನಡೆದಿದೆ.

ಜರ್ಮನ್ ಪ್ರಜೆಗಳು ಪ್ರವಾಸ ತೆರಳುತ್ತಿರುವ ದಾರಿ ಮಧ್ಯೆ ಹೊಸಂಗಡಿಯಲ್ಲಿ ವ್ಯಾನನ್ನು ನಿಲ್ಲಿಸಿ ಉಳಿದುಕೊಳ್ಳಲು ಕೊಠಡಿಯನ್ನು ಹುಡುಕುತ್ತಿರುವ ವೇಳೆ ಐದು ಮಂದಿ ದರೋಡೆಕೋರರು ಜರ್ಮನ್ ಪ್ರಜೆಗಳ ಕೈಯಲ್ಲಿದ್ದ ಹದಿನಾರು ಸಾವಿರ ರೂಪಾಯಿಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಜರ್ಮನ್ ಪ್ರಜೆಗಳು ಮಂಜೇಶ್ವರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತಿದ್ದಾರೆ.

Related posts

Leave a Reply

Your email address will not be published. Required fields are marked *