Header Ads
Header Ads
Breaking News

ಮಂಜೇಶ್ವರ ಕಮ್ಯುನಿಟಿ ಹೆಲ್ತ್ ಸೆಂಟರಿನಲ್ಲಿ ರಕ್ತ ತಪಾಸಣೆಗೆ ಸಿಬ್ಬಂದಿ ಕೊರತೆ : ಸಾರ್ವಜನಿಕರ ಆಕ್ರೋಶ

ಮಂಜೇಶ್ವರದ ಹಲವು ಕಡೆಗಳಿಂದ ಆಗಮಿಸುತ್ತಿರುವ ರೋಗಿಗಳಿಗೆ ಆಶ್ರಯ ತಾಣವಾಗಿರುವ ಮಂಜೇಶ್ವರ ಕಮ್ಯುನಿಟಿ ಹೆಲ್ ಸೆಂಟರ್‌ನಲ್ಲಿ ಆವಶ್ಯಕ್ಕನುಸಾರವಾದ ವೈದ್ಯರುಗಳು ಹಾಗೂ ನರ್ಸ್‌ಗಳು ಇದ್ದರೂ ರಕ್ತ ತಪಾಸಣಾ ಸಿಬ್ಬಂಧಿ ವರ್ಗಾವಣೆಗೊಂಡ ಬಳಿಕ ಕಳೆದ ಒಂದು ತಿಂಗಳಿನಿಂದ ಇಲ್ಲಿ ಬರುತ್ತಿರುವ ಬಡ ರೋಗಿಗಳು ರಕ್ತ ತಪಾಸಣೆಗೆ ದುಬಾರಿ ಬೆಲೆಗಳ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ದುಸ್ಥಿತಿ ಬಂದೊದಗಿದೆ.

ಶನಿವಾರ ತನಕ ರಕ್ತ ತಪಾಸಣೆಗೆ ಸರಕಾರದ ವತಿಯಿಂದ ಸಿಬ್ಬಂದಿಗಳು ಆಗಮಿಸದೇ ಇದ್ದರೆ ಸೋಮವಾರದಿಂದ ನಮ್ಮ ಪೈಕಿಯಿಂದ ರಕ್ತ ತಪಾಸಣೆಗೆ ಸಿಬ್ಬಂದಿಗಳನ್ನು ನೇಮಕಗೊಳಿಸುವುದಾಗಿ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ತಿಳಿಸಿದ್ದಾರೆ. ಅದೇ ರೀತಿ ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿ ಆಲಸ್ಯ ತೋರಿಸುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಇದನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವ್ಯವಸ್ಥೆಯನ್ನು ಸರಿಪಡಿಸದೇ ಇದ್ದರೆ ಪ್ರತಿಭಟನೆಗೆ ಸಜ್ಜಾಗುವುದಾಗಿ ಡಿ ವೈ ಎಫ್ ಐ ಕುಂಜತ್ತೂರು ವಿಲೇಜ್ ಅಧ್ಯಕ್ಷ ಮುನೀರ್ ತೂಮಿನಾಡು ಎಚ್ಚರಿಸಿದ್ದಾರೆ.

Related posts

Leave a Reply

Your email address will not be published. Required fields are marked *