Header Ads
Header Ads
Breaking News

ಮಂಜೇಶ್ವರ: ಕುಂಜತ್ತೂರಿನ ಅಲ್ ಮದ್ರಸತುಲ್ ಜಲಾಲಿಯ್ಯ ನೂತನ ಮದ್ರಸ ಕಟ್ಟಡ ಹಾಗೂ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

ಮಂಜೇಶ್ವರ: ಕುಂಜತ್ತೂರು ಹೈಸ್ಕೂಲ್ ರಸ್ತೆ ಹಾಗೂ ಪದವು ರಸ್ತೆಯ ಮದ್ಯ ಭಾಗದಲ್ಲಿ ಜಲಾಲಿಯ್ಯ ಮಸೀದಿ ಸಮಿತಿಯ ಆಶ್ರಯದಲ್ಲಿ ಕಾರ್ಯಾಚರಿಸಿಕೊಂಡು ಬರುತ್ತಿರುವ ಅಲ್ ಮದ್ರಸತುಲ್ ಜಲಾಲಿಯ್ಯ ಇದರ ನೂತನ ಮದ್ರಸ ಕಟ್ಟಡಕ್ಕೆ ಹಾಗೂ ನೂತನವಾಗಿ ನಿರ್ಮಿಸುವ ಜಲಾಲಿಯ್ಯ ಮಸೀದಿ ವಸತಿ ಸಮುಚ್ಚಯಕ್ಕೆ ಶಿಲಾಸ್ಥಾಪನಾ ಸಮಾರಂಭವು ಅಸರ್ ನಮಾಜಿನ ಬಳಿಕ ನೆರವೇರಿತು.ನೂತನ ಮದ್ರಸ ಕಟ್ಟದದ ಶಿಲಾಸ್ಥಾಪನೆಯನ್ನು ಕೆ ಎಸ್ ಅಲಿ ತಂಘಲ್ ಕುಂಬೋಲ್ ನೆರವೇರಿಸಿದರು. ಅದೇ ರೀತಿ ಜಲಾಲಿಯ ಮಸೀದಿ ನೂತನ ವಸತಿ ಸಮುಚ್ಚಯ ಶಿಲಾ ಸ್ಥಾಪನೆಯನ್ನು ಅತ್ತಾವುಲ್ಲ ತಂಘಲ್ ಎಂ ಎ. ಉದ್ಯಾವರ ರವರು ನೆರವೇರಿಸಿದರು.
ಪೊಸೋಟ್ ಖತೀಬ್ ಝೈನುಲ್ ಆಬಿದೀನ್ ಜಿಫ್ರಿ ತಂಘಲ್ ಪ್ರಾರ್ಥಣೆ ನಡೆಸಿದರು.ಖುರಾನ್ ಪಾರಾಯಣದ ಬಳಿಕ ವೇದಿಕೆಯಲ್ಲಿ ಜಲಾಲಿಯ್ಯ ಮಸೀದಿ ಹಾಗೂ ಮದ್ರಸ ಕಮಿಟಿ ಅಧ್ಯಕ್ಷ ಎ ಆರ್ ಅಬ್ದುಲ್ ರಹ್ಮಾನ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕೆ ಎಸ್ ಅಲಿ ತಂಘಲ್ ಕುಂಬೋಲ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಲ್ಲಾವುವಿನ ಅನುಗ್ರಹದೊಂದಿಗೆ ಒಂದು ಮಸೀದಿ ಪೂರ್ತೀಕರಿಸಿದ ಬೆನ್ನಲ್ಲೇ ಮದ್ರಸ ಹಾಗೂ ಸಮುಚ್ಚಯದ ಕಟ್ಟಡಕ್ಕೂ ಶಿಲಾಸ್ಥಾಪನವಾಯಿತು. ಈ ಕಟ್ಟಡವನ್ನು ಆ ಪರಮ ದಯಾನೂ ಕಾರುಣಿಗನೂ ಆದ ಪರಮಾತ್ಮನು ಆದಷ್ಟು ಬೇಗ ಪೂರ್ತೀಕರಿಸಲಿ ಎಂದು ಹೇಳಿ ಶುಭವನ್ನು ಹಾರೈಸಿದರು. ಬಳಿಕ ಮುಖ್ಯ ಅತಿಥಿಯಾಗಿದ್ದ ಉದ್ಯಾವರ ಸಾವಿರ ಜಮಾಹತ್ ಖತೀಬ್ ಅಬ್ದುಲ್ ಕರೀಂ ಧಾರಿಮಿ ಮಾತನಾಡಿ – ಒಬ್ಬ ಮುಸಲ್ಮಾನನಾಗಬೇಕಾದರೆ ಆತ ಇಸ್ಲಾಂ ದೀನನ ಬಗ್ಗೆ ಅರಿಯಬೇಕಾಗಿದೆ. ಅದನು ಕಲಿಯುವುದು ಇಸ್ಲಾಮಿಕ ಪಠ್ಯಗಳಿಂದ. ಇದನ್ನು ಕಲಿಯಬೇಕಾದರೆ ಒಂದು ಮದ್ರಸ ಅತೀ ಅಗತ್ಯ. ಅದನ್ನು ಮನಗಂಡು ಇಲ್ಲಿಯ ಪ್ರದೇಶವಾಸಿಗಳು ಒಕ್ಕೊರಳಿನಿಂದ ನಿರ್ಮಿಸಲು ತೀರ್ಮಾನಿಸಿಒರುವ ಕಟ್ಟಡವು ಅದಷ್ಟು ಬೇಗ ಪೂರ್ತಿಯಾಗಲಿ ಎಂಬುದಾಗಿ ಶುಭ ಹಾರೈಸಿದರು. ಪ್ರಾಸ್ತಾವಿಕ ಬಾಷಣವನ್ನು ಮಾಡಿ ಮಾತನಾಡಿದ ಕುಂಜತ್ತೂರು ಖತೀಬ್ ಕೆ ಹಾಶಿರ್ ಅಲ್ ಹಾಮಿದಿ ಮಾತನಾಡಿ ಈ ಪ್ರದೇಶದಲ್ಲಿ ಇಷ್ಟೊಂದು ಒಳ್ಳೆಯ ಮಸೀದಿ ನಿರ್ಮಾಣವಾಗಬಹುದಾಗಿ ನಾನು ಅಂದು ಕೊಂಡಿರಲಿಲ್ಲ. ಆದರೆ ದೇವರ ಅನುಗ್ರಹದಿಂದ ಎಲ್ಲಾ ಅನುಕೂಲದ ಮಸೀದಿ ನಿರ್ಮಾಣವಾಗಿದೆ. ಇದಕ್ಕೆ ಊರವರ ಕೈಜೋಡನೆಯೇ ಪ್ರಮುಖ ಕಾರಣ. ಅದೇ ರೀತಿ ಇದೀಗ ಮದ್ರಸ ಹಾಗೂ ವಸತಿ ಸಮುಚ್ಚಯಗಳ ಕಟ್ಟಡಕ್ಕೆ ಶಿಲಾನ್ಯಾಸವಾಗಿದೆ. ಇದು ಕೂಡಾ ಊರವರ ಕೈಜೋಡನೆಯಿಂದ ಪೂರ್ತಿಯಾಗಬಹುದಾಗಿ ಎಳಿ ಶುಭವನ್ನು ಹಾರೈಸಿದರು. ಈ ಸಂದರ್ಭ ವೇದಿಕೆಯಲ್ಲಿ ಡಾ. ಎ ಖಾದರ್, ಸೂಫಿ ಹಾಜಿ, ಹರ್ಷಾದ್ ವರ್ಕಾಡಿ, ತೌಸೀಫ್ ಆಹ್ಮದ್ ಹನೀಫಿ, ಎಂ ಪಿ ಇಬ್ರಾಹಿಂ ಫೈಝಿ, ಮೊಹಮ್ಮದ್ ಫೈಝಿ, ಸಿದ್ದೀಖ್ ಫೈಝಿ, ಅಬ್ದುಲ್ ರಹ್ಮಾನ್ ಹರ್ಶಿದಿ, ಮೊಯಿದೀನ್ ಕುಂಞಿ ಹಾಜಿ ಪ್ರಿಯಾ, ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು.
ಸಮಾರಂಭದಂಗವಾಗಿ ಎರಡು ದಿನಗಳ ಧಾರ್ಮಿಕ ಬಾಷಣ ಸೋಮವಾರದಂದು ಸಮಾಪ್ತಿಗೊಳ್ಳಲಿದೆ
ಹಾಶಿರ್ ಅಲ್ ಹಾಮಿದಿ ಸ್ವಾಗತಿಸಿ ಬಶೀರ್ ಐ ಸ್ವಾಗತಿಸಿದರು.

Related posts

Leave a Reply

Your email address will not be published. Required fields are marked *