Header Ads
Header Ads
Breaking News

ಮಂಜೇಶ್ವರ :ಕೋಮುವಾದದ ವಿರುದ್ದ ಸಿಪಿಎಂನಿಂದ ಕಾಲ್ನಡಿಗೆ ಜಾಥಾ

ಕೋಮುಶಕ್ತಿ ನಾಶಗೊಳ್ಳಲಿ ಎನ್ನುವ ಘೋಷಣೆಯೊಂದಿಗೆ ಸಿಪಿಎಂ ಮಂಜೇಶ್ವರ ಮಂಡಲದ ವತಿಯಿಂದ ಕಾಟುಕುಕ್ಕೆಯಲ್ಲಿ ಆರಂಭಗೊಂಡಿದ್ದ ಸಿಪಿಎಂ ಕಾಲ್ನಡಿಗೆ ಜಾಥಾ ಹೊಸಂಗಡಿಯಲ್ಲಿ ಸಮಾಪ್ತಿಗೊಂಡಿತು. ಬಾಲಕೃಷ್ಣ ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಮಾಸ್ಟರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಹಿಂದೂ ಮುಸ್ಲಿಂ ಬಾಂಧವರ ಮಧ್ಯೆ ವಿಷಬೀಜವನ್ನು ಬಿತ್ತಿ ಮತ್ತೊಮ್ಮೆ ಅಧಿಕಾರವನ್ನು ಪಡೆಯಲು ಮೋದಿ ಸರಕಾರ ಮುಂದಾಗಿದೆ. ಇದಕ್ಕೆ ನಮ್ಮ ಮಂಜೇಶ್ವರ ಕೂಡಾ ಸಾಕ್ಷಿಯಾಗುತ್ತಿದೆ. ಕೋಮುವಾದವನ್ನು ಆಟದ ಮೈದಾನಕ್ಕೂ ವಿಸ್ತರಿಸಿ ಭಾರತವನ್ನು ವಿಭಜಿಸಲು ಹೊರಟ ಮೋದಿ ಸರಕಾರದ ನೀತಿಯನ್ನು ಸಿಪಿಎಂ ಶಕ್ತವಾಗಿ ಎದುರಿಸುತ್ತದೆ ಎಂದು ಹೇಳಿದರು.

ಈ ಸಂದರ್ಭ ಜಾಥಾ ಪ್ರಮುಖರಾದ ವಿಪಿಪಿ ಮುಸ್ತಫ, ಕೆ.ಆರ್. ಜಯಾನಂದ, ಶಂಕರ ರೈ, ಅಬ್ದುಲ್ ರಜಾಕ್ ಚಿಪ್ಪಾರು, ರಘುದೇವನ್ ಮಾಸ್ಟರ್, ಸಿಎ ಝುಬೈರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related posts

Leave a Reply