Header Ads
Breaking News

ಮಂಜೇಶ್ವರ ಗಡಿಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಣ ಗುಂಡಿಗಳು

ಮಂಜೇಶ್ವರ: ಕೇರಳ ಕರ್ನಾಟಕದ ಗಡಿ ಪ್ರದೇಶವಾದ ತಲಪಾಡಿ ಆರ್‌ಟಿಒ ಕಚೇರಿಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯಲ್ಲಿ ಬೃಹತ್ತಾಕಾರದ ಹೊಂಡ ಗುಂಡಿಗಳಿದ್ದು, ವಾಹನ ಸವಾರರು ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಈ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೃಹತ್ತಾಕಾರದ ಗುಂಡಿಗಳು ಪ್ರತ್ಯಕ್ಷವಾಗಿದ್ದು, ಮಳೆ ಬಂದರೆ ನೀರಿನಲ್ಲಿ ಆವೃತವಾಗಿರುವ ಗುಂಡಿಗಳು ಗೋಚರಿಸದೆ ವಾಹನಗಳು ಗುಂಡಿಯೊಳಗೆ ಬಿದ್ದು ಅಲ್ಲೇ ಸ್ಥಗಿತ ಗೊಂಡು ಸಂಚಾರ ಮೊಟಕುಗೊಳ್ಳುವ ದೃಶ್ಯಗಳು ದಿನ ನಿತ್ಯ ಸಂಭವಿಸುತ್ತಲೇ ಇದೆ.
ಇನ್ನು ತೂಮಿನಾಡು ಜಂಕ್ಷನ್‌ನಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ಎರಡು ಭಾಗಗಳ ಚರಂಡಿಯನ್ನು ಮುಚ್ಚಲಾಗಿದ್ದು, ಒಂದು ಮಳೆ ಬಂದರೆ ರಾಷ್ಟ್ರೀಯ ಹೆದ್ದಾರಿ ತೊಡಾಗಿ ಪರಿಣಮಿಸುತ್ತದೆ. ಜೊತೆಯಾಗಿ ಸಮೀಪದ ವ್ಯಾಪಾರ ಸಂಸ್ಥೆಗಳಿಗೂ ನೀರು ನುಗ್ಗುತ್ತಿರುವ ದೃಶ್ಯ ಕಂಡು ಬರುತ್ತಿದೆ.
ತೂಮಿನಾಡಿನ ಹಳೆ ಆರ್‌ಟಿಒ ಬಳಿ ಕೂಡಾ ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದು ಅಪಘತಗಳು ಸಂಭವಿಸುತ್ತಲೇ ಇದೆ. ಜೀವ ಬಲಿಯಾಗುವುದಕ್ಕಿಂತ ಮೊದಲಾದರೂ ಸಂಬಂಧ ಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *