Header Ads
Breaking News

ಮಂಜೇಶ್ವರ ಗೋವಿಂದ ಪೈ ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿ ಗ್ರಾಮಸ್ಥರಿಂದ ತಡೆ

ಮಂಜೇಶ್ವರ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮಂಜೂರಾದ ಫಂಡ್ ನಿಂದ ಮಂಜೇಶ್ವರ ಗೋವಿಂದ ಪೈ ರಸ್ತೆಗೆ ಅರ್ಧಂಬರ್ಧ ಕಾಮಗಾರಿ ನಡೆಸುತಿದ್ದ ಗುತ್ತಿಗೆದಾರನ ಕಾಮಗಾರಿಗೆ ಊರವರು ತಡೆಯೊಡ್ದಿದ್ದಾರೆ. ಇಂತಹ ಗುತ್ತಿಗೆಗಾರನಿಗೆ ಕೆಲಸ ನಿರ್ವಹಿಸುವ ಜವಾಬ್ಧಾರಿ ನೀಡಬಾರದಾಗಿ ಉನ್ನತ ಅಧಿಕಾರಿಗಳಿಗೆ ಊರವರು ಎಚ್ಚರಿಸಿದ್ದಾರೆ.

ವರ್ಷಂಪ್ರತಿ ಈ ರಸ್ತೆಗೆ ಲಕ್ಷಾಂತರ ರೂಪಾಯಿಗಳ ಅನುದಾನ ಲಭಿಸುತ್ತಿದ್ದು, ಇದನ್ನು ಗುತ್ತಿಗೆದಾರ ಆತನಿಗೆ ಬೇಕಾದ ಶೈಲಿಯಲ್ಲಿ ಫಂಡ್‍ನ ಕಾಲುಭಾಗವಷ್ಟಾದರೂ ಖರ್ಚು ಮಾಡದೆ ಒಂದೇ ಮಳೆಗೆ ಕೊಚ್ಚಿ ಹೋಗುವ ರೀತಿಯಲ್ಲಿ ಕಾಮಗಾರಿ ನಡೆಸುತ್ತಿರುವುದಾಗಿ ಊರವರು ಆರೋಪಿಸುತಿದ್ದಾರೆ. ಮಂಜೇಶ್ವರದಿಂದ ಗೇರು ಕಟ್ಟೆ ತನಕ ಸರಿಯಾದ ರೀತಿಯಲ್ಲಿ ಕಾಮಗಾರಿಯನ್ನು ನಡೆಸಿದ ಬಳಿಕ ಅದರ ನಂತರದ ರಸ್ತೆಯನ್ನು ಗುತ್ತಿಗೆದಾರನಿಗೆ ಬೇಕಾದ ರೀತಿಯಲ್ಲಿ ನಡೆಸುವ ಸಂದರ್ಭ ಊರವರು ತಡೆಯೊಡ್ಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಇಂಜಿನಿಯರಿಗೆ ಊರವರು ಕರೆ ಮಾಡಿದಾಗ ಆತ ಪೊನ್ ತೆಗೆಯುವುದಿಲ್ಲವೆಂದು ದೂರಲಾಗಿದೆ. ಸಾಧಾರಣ ಯಾವುದೇ ಕಾಮಗಾರಿ ನಡೆಯುವಾಗಲೂ ಇಂಜಿನಿಯರ್ ಸಮ್ಮುಖದಲ್ಲಿ ಮಾಡಬೇಕಾಗಿದೆ. ಆದರೆ ಆರಂಭದ ದಿನಗಳಿಂದಲೂ ಇಲ್ಲಿ ಇಂಜಿನಿಯರ್ ನಾಪತ್ತೆಯಾಗಿರುವುದಾಗಿ ಊರವರು ಆರೋಪಿಸುತಿದ್ದಾರೆ.

ಗೇರುಕಟ್ಟೆಗೆ ತೆರಳುವಂತಹ ಈ ರಸ್ತೆಯಲ್ಲಿ 6 ಖಾಸಗಿ ಬಸ್‍ಗಳು ಓಡಾಟ ನಡೆಸುತ್ತಿವೆ. ಹದಗೆಟ್ಟ ರಸ್ತೆಯಿಂದ ಈ ರೂಟ್‍ನಲ್ಲಿ ಬರುವ ಆದಾಯಕ್ಕಿಂತ ವಾಹನ ದುರಸ್ತಿ ಖರ್ಚೇ ಹೆಚ್ಚಾಗುತ್ತಿದೆ. ಇದರಿಂದ ಬಸ್ ಮಾಲಕರು ನಷ್ಟ ಅನುಭವಿಸುವಂತಾಗಿದೆ. ಒಂದು ವೇಳೆ ಬಸ್ ಸಂಚಾರ ಸ್ಥಗಿತಗೊಂಡರೆ ಈ ಭಾಗದ ಜನರಿಗೆ ಶಾಲಾ ಕಾಲೇಜು, ಕೆಲಸಗಳಿಗೆ ತೆರಳುವವರಿಗೆ ಸಮಸ್ಯೆ ಎದುರಾಗಲಿದೆ. ಇದೀಗ ಅರ್ಧಂಬರ್ಧ ಕಾಮಗಾರಿ ನಡೆಸಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಗುತ್ತಿಗೆದಾರನ ಶ್ರಮವನ್ನು ಊರವರು ವಿಫಲಗೊಳಿಸಿದ್ದಾರೆ.

Related posts

Leave a Reply

Your email address will not be published. Required fields are marked *