Header Ads
Header Ads
Breaking News

ಮಂಜೇಶ್ವರ ಗ್ರಾ. ಪಂ. ನ 6 ನೇ ವಾರ್ಡಿನಲ್ಲಿ ನೀರಿನ ಕ್ಷಾಮ: ವಾರ್ಡ್ ಸದಸ್ಯೆ ಗಾಢ ನಿದ್ರೆಗೆ ಜಾರಿರುವುದಾಗಿ ಆರೋಪ

 

ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಪಿಡಿಪಿ ಯಿಂದ ಆಯ್ಕೆಯಾದ  6ನೇ ವಾರ್ಡಿನ ಪರಿಶಿಷ್ಟ ವರ್ಗದ ಕಾಲನಿಯಲ್ಲಿ ತುತ್ತು ಅನ್ನ ಬೇಯಿಸಲು ಕೂಡಾ ನೀರಿಲ್ಲದೆ ಸುಮಾರು ಎರಡು ಕಿಲೋ ಮೀಟರಿನಷ್ಟು ನಡೆದು ಕೊಂಡೇ ಹೋಗಿ ಹಾಗೂ ಕೆಲವು ಸಂದರ್ಭಗಳಲ್ಲಿ ಹಣದಿಂದ ನೀರನ್ನು ಖರೀದಿಸುವಂತಹ ದುಸ್ಥಿತಿ ಬಂದೊದಗಿದರೂ ಇದಕ್ಕೊಂದು ಪರಿಹಾರವನ್ನು ಕಾಣಬೇಕಾದ ವಾರ್ಡ್ ಸದಸ್ಯೆ ಇತ್ತ ತಿರುಗಿಯೂ ನೋಡಲಿಲ್ಲವೆಂಬುದಗಿ ಕಾಲನಿವಾಸಿಗಳು ಆರೋಪಿಸುತಿದ್ದಾರೆ.

ಸುಮಾರು 16 ವರ್ಷಕ್ಕೆ ಮೊದಲು ಗ್ರಾ. ಪಂ. ವತಿಯಿಂದ ಈ ಪ್ರದೇಶದಲ್ಲಿ ಕೊಳವೆ ಬಾವಿಯನ್ನು ನಿರ್ಮಿಸಲಾಗಿದ್ದರೂ ಕಳೆದ ಒಂದು ವರ್ಷದಿಂದ ಇದು ಹಾಳಾಗಿ ಕಾಲನಿ ವಾಸಿಗಳಿಗೆ ಏಕೈಕ ಆಶ್ರಯವಾಗಿದ್ದ ನೀರಿನ ವ್ಯವಸ್ಥೆ ಮೊಟಕುಗೊಂಡಿದೆ. ಈ ಬಗ್ಗೆ ಕಾಲನಿವಾಸಿಗಳು ಹಲವಾರು ಸಲ ವಾರ್ಡ್ ಸದಸ್ಯೆಯ ಗಮನಕ್ಕೆ ತಂದರೂ ಯಾವುದೇ ಪ್ರಯತ್ನ ನಡೆಸಿಲ್ಲವೆಂಬುದಾಗಿ ಅರೋಪಿಸುತಿದ್ದಾರೆ.

ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಯವರಿಗೂ ಮನವಿಯನ್ಮ್ನು ನೀಡಿರುವುದಾಗಿಯೂ ಕಾಲನಿವಾಸಿಗಳು ಹೇಳುತಿದ್ದಾರೆ. ಈ ಕಾಲನಿಯಲ್ಲಿರುವ ಅಧಿಕ ಮಂದಿ ಕೂಡಾ ಬೆಳಿಗ್ಗೆ ಕೆಲಸಕ್ಕೆ ತೆರಳಿದರೆ ಸಂಜೆಯಾಗುವಾಗ ಮರಳಿ ಬರುವುದು. ಅದರ ಬಳಿಕವೇ ಇವರು ಎರಡು ಕಿಲೋ ಮೀಟರಿನಷ್ಟು ಕಾಲ್ನಡಿಗೆಯಲ್ಲೇ ನೀರನ್ನು ಹೊತ್ತು ಕೊಂಡು ಬರಬೇಕಾದ ದುಸ್ಥಿತಿ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *