Header Ads
Breaking News

ಮಂಜೇಶ್ವರ ಗ್ರಾ.ಪಂ.20ನೇ ವಾರ್ಡ್ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆ : ದುರಸ್ತಿಗೆ ಆಗ್ರಹಿಸಿದ ಉದ್ಯಾವರ ದಮ್ಮಾಮ್ ಸಮಿತಿ

ಮಂಜೇಶ್ವರ ಗ್ರಾ.ಪಂ.ನ 20ನೇ ವಾರ್ಡ್ ವ್ಯಾಪ್ತಿಯಲ್ಲಿ ಇರ್ಷಾದ್ ನಗರ ರಾಷ್ಟ್ರೀಯ ಹೆದ್ದಾರಿಯಿಂದ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ದಾರಿಯಾಗಿ ಬಿಎಸ್ ನಗರಕ್ಕೆ ಹೋಗುವ ಪಂಚಾಯತ್ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಳೆದ ಹಲವು ಬಾರಿ ಪಂಚಾಯತ್ ಫಂಡ್ ಮಂಜೂರಾಗಿದ್ದರೂ ಮರು ಡಾಮರೀಕರಣ ಆಗದೆ ಇರುವ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣವಾಗಿ ಹೊಂಡಗಳಿಂದ ತುಂಬಿಕೊಂಡಿದೆ. ಪ್ರಸಿದ್ದವಾದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ, ಉದ್ಯಾವರ ಸಾವಿರ ಜಮಾಹತ್ ಮಸೀದಿ ಸೇರಿದಂತೆ ವಿದ್ಯಾಭ್ಯಾಸ ಕೇಂದ್ರ ಹಾಗೂ ನೂರಕ್ಕೂ ಮಿಕ್ಕ ಕುಟುಂಬಗಳು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಊರವರು ಹಲವಾರು ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತನಿಧಿಗಳಿಗೆ ಮನವಿಯನ್ನು ಸಲ್ಲಿಸಿದರೂ ಯಾವುದೇ ಸ್ಪಂಧನೆ ಇಲ್ಲವೆನ್ನಲಾಗಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಉದಾಸೀನತೆಯನ್ನು ವಿರೋಧಿಸಿ ಸೌದಿ ಅರೇಬಿಯಾದ ದಮ್ಮಾಮ್‍ನಲ್ಲಿರುವ ಉದ್ಯಾವರ ಆನಿವಾಸಿ ಭಾರತೀಯರ ಸಂಘಟನೆಯಾದ ಉದ್ಯಾವರ ದಮ್ಮಾಮ್ ಸಮಿತಿ ಈ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಸಭೆಯ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಮಾತ್ರವಲ್ಲ ಸಂಬಂಧಪಟ್ಟವರು ಆದಷ್ಟು ಬೇಗನೆ ಎಚ್ಚೆತ್ತು ಹದೆಗೆಟ್ಟ ರಸ್ತೆಗೆ ಮರುಡಾಮಾರೀಕರಣ ನಡೆಸುವಂತೆ ಆಗ್ರಹಿಸಿದೆ. ಈ ಬಗ್ಗೆ ವಿ4 ನ್ಯೂಸ್ ಬ್ಲಾಕ್ ಪಂಚಾಯತ್ ಸದಸ್ಯ ಮುಸ್ತಫಾರವರನ್ನು ಸಂಪರ್ಕಿಸಿದಾಗ ರಸ್ತೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಂಜೇಶ್ವರ ಶಾಸಕ ಖಮರುದ್ದೀನ್ ಸೇರಿದಂತೆ ಗ್ರಾ. ಪಂ. ಬ್ಲಾಕ್ ಪಂ. ಜನಪ್ರತಿನಿಧಿಗಳು ಒಟ್ಟು ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದಷ್ಟು ಬೇಗ ಈ ರಸ್ತೆಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *