Header Ads
Header Ads
Breaking News

ಮಂಜೇಶ್ವರ: ಜನಾರೋಗ್ಯವೇ ರಾಷ್ಟ್ರಶಕ್ತಿ ಮ್ಯಾರಥಾನ್

ಮಂಜೇಶ್ವರ: ಆರೋಗ್ಯವಿರುವ ಜನತೆ ಆರೋಗ್ಯವಿರುವ ರಾಷ್ಟ್ರ ಎಂಬ ಚಳವಳಿಯ ಭಾಗವಾಗಿ ಪಾಪ್ಯುಲರ್ ಫ್ರಂಟ್ ಮಂಜೇಶ್ವರ ಏರಿಯಾ ಸಮಿತಿ ಮ್ಯಾರಥಾನ್ ಓಟ ಹಾಗೂ ಯೋಗ ಪ್ರದರ್ಶನ ನಡೆಯಿತು.ಮಂಜೇಶ್ವರ ಪೊಲೀಸ್ ಠಾಣಾ ಪರಿಸರದಿಂದ ಸಂಘಟನೆಯ ಏರಿಯಾ ಅಧ್ಯಕ್ಷ ಮುಸ್ತಫ ಮಚ್ಚಂಪ್ಪಾಡಿ ಅವರು ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು.ರಿಜಿಸ್ಟ್ರಾರ್ ಕಚೇರಿ ದಾರಿಯಾಗಿ ಸಾಗಿದ ಮ್ಯಾರಥಾನ್ ಓಟ ಮಂಜೇಶ್ವರ ಪೇಟೆಯಲ್ಲಿ ಸಮಾಪ್ತಿಗೊಂಡಿತು. ಬಳಿಕ ಯೋಗದ ಅಭ್ಯಾಸಗಳನ್ನು ಪ್ರದರ್ಶಿಸಲಾಯಿತು.

ವಿಭಿನ್ನವಾದ ಜೀವನದ ಶೈಲಿಯಲ್ಲಿ ರೋಗಗಳು ದಿನದಿಂದ ದಿನಕ್ಕೆ ಅಧಿಕ ಗೊಳ್ಳುತ್ತಿರುವ ಈ ವರ್ತಮಾನ ಕಾಲದಲ್ಲಿ ಜೀವನವನ್ನು ರೋಗಮುಕ್ತಗೊಳಿಸಲು ಯೋಗ ಅದೇ ರೀತಿ ವ್ಯಾಯಯಮಗಳು ಅತೀ ಅಗತ್ಯವಾಗಿದೆ. ರಾಷ್ಟ್ರದ ಸಂಪತ್ತು ಆರೋಗ್ಯಕರವಾಗಿರುವ ಪ್ರಜೆಯಾಗಿರುವುದಾಗಿ ಕಳೆದ ಹಲವಾರು ವರ್ಷಗಳಿಂದ ಇಂತಹ ವಿಷಯಗಳಲ್ಲಿ ಪಾಪ್ಯುಲರ್ ಫ್ರಂಟ್ ಜನರಿಗೆ ಭೋಧನೆಯನ್ನು ನೀಡುತ್ತಾ ಬಂದಿರುವುದಾಗಿಯೂ ಏರಿಯಾಧ್ಯಕ್ಷ ಮುಸ್ತಫ ಮಚ್ಚಂಪ್ಪಾಡಿ ಹೇಳಿದರು.ಗ್ರಾಮ ಪಂಚಾಯತ್ ಸದಸ್ಯ ಫೈಸಲ್ ಮಚ್ಚಂಪ್ಪಾಡಿ, ಸಂಘಟನೆಯ ವಲಯ ಕಾರ್ಯದರ್ಶಿ ಝಕರಿಯ್ಯ ಉದ್ಯಾವರ, ಅಲಿ ಮೀಯಪದವು, ಸಿದ್ದೀಖ್ ಮಚ್ಚಂಪ್ಪಾಡಿ, ಮೊದಲಾದವರು ಹಾಜರಿದ್ದರು.

Related posts

Leave a Reply