Header Ads
Header Ads
Breaking News

ಮಂಜೇಶ್ವರ: ಜಲನಿಧಿ ಯೋಜನೆಯ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ

ಮಂಜೇಶ್ವರ: ಮೀಂಜ ಪಂಚಾಯತ್‌ನ ಮೂಡಂಬೈಲ್ ಹಾಗೂ ಬೆಜ್ಜ ವಾರ್ಡಿನ ಪಜಿಂಗಾರಿನಲ್ಲಿ ನಿರ್ಮಾಣವಾದ ಶುದ್ದ ಕುಡಿಯುವ ನೀರಿನ ಜಲನಿಧಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಲಭಿಸುವ ಶುದ್ದ ಕುಡಿಯುವ ನೀರು ಕಲುಷಿತವಾಗಲು ಕಾಮಗಾರಿಯಲ್ಲಿ ಗುತ್ತಿಗೆದಾರನ ಕಳಪೆ ಕಾಮಗಾರಿಯೇ ಕಾರಣವೆಂಬುದಾಗಿ ಪಜಿಂಗಾರ್ ಶುದ್ದ ಜಲ ವಿತರಣಾ ಫಲಾನುಭಾವಿಗಳ ಸಮಿತಿ ಆರೋಪಿಸಿದೆ.ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೋಶಾಧಿಕಾರಿ ಜ್ಯುಲಿಯಾನ ಡಿ ಸೋಜ ಅವರು,30 ಲಕ್ಷ ರೂ. ಖರ್ಚಿನಲ್ಲಿ 2015 ರಲ್ಲಿ ನಿರ್ಮಿಸಲಾದ ಈ ಯೋಜನೆಯಲ್ಲಿ ೩೪ ಫಲಾನುಭಾವಿಗಳು ಇದ್ದಾರೆ. ಯೋಜನೆಯ ಪ್ರಕಾರ ಎರಡು ಸೆಂಟ್ಸ್ ಭೂಮಿಯನ್ನು ಕ್ರಯಕ್ಕೆ ಪಡೆದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಒಂದೂವರೆ ಸೆಂಟ್ಸ್ ನಲ್ಲಿ ಬಾವಿ ಹಾಗೂ ಅರ್ಧ ಸೆಂಟ್ಸ್ ಸ್ಥಳದಲ್ಲಿ ಟ್ಯಾಂಕನ್ನು ನಿರ್ಮಿಸಲಾಗಿತ್ತು.ಬಾವಿಗೆ ಸುತ್ತ ಸಿಮೆಂಟಿನಿಂದ ಸಾರನೆ ಮಾಡಲು ಹಾಗೂ ಟ್ಯಾಂಕಿಗೆ ನೀರು ಮೇಲೇರುವ ಸ್ಥಳದಲ್ಲಿ ನೀರನ್ನು ಶುದ್ದೀಕರಿಸಲು ಫಿಲ್ಟರ್ ಸ್ಥಾಪಿಸಲು ಯೋಜನೆಯಲ್ಲಿ ನಿರ್ಧೇಶವಿತ್ತು. ಆದ್ರೆ ಒಬ್ಬರನ್ನು ಬೇನಾಮಿಯಗಿ ನಿಲ್ಲಿಸಿ ಶುದ್ದ ಜಲ ವಿತರಣಾ ಫಲಾನುಭವಿಗಳ ಸಮಿತಿಯ ಮಾಜಿ ಅಧ್ಯಕ್ಷ ಎಸ್ಟಿಮೇಟ್ ಪ್ರಕಾರ ಕಾಮಗಾರಿಯನ್ನು ಪೂರ್ತೀಕರಿಸದೆ ಕಲಪೆ ಕಾಮಗಾರಿ ನಡೆಸಿ ಹಣ ಪಡೆದಿರುವುದಾಗಿ ಆರೋಪಿಸಿದ್ದಾರೆ. ಮಾತ್ರವಲ್ಲದೆ ೩೪ ಫಲಾನುಭಾವಿಗಳ ಪೈಕಿ ಈ ತನಕ ಎರಡು ಫಲಾನುಭಾವಿಗಳಿಗೆ ಈ ತನಕ ಸಂಪರ್ಕ ನೀಡಿಲ್ಲವೆನ್ನಲಾಗಿದೆ.ಸುದ್ದಿಗೋಷ್ಟಿಯಲ್ಲಿ ಸಮಿತಿ ಅಧ್ಯಕ್ಷೆ ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ ಜಯ ಐ, ಹಾಗೂ ಈಶ್ವರ್ ನಾಯ್ಕ್ ಉಪಸ್ಥರಿದ್ದರು.

Related posts

Leave a Reply