Header Ads
Header Ads
Breaking News

ಮಂಜೇಶ್ವರ: ಟೆಂಪೋ ಟ್ಯಾಕ್ಸಿ ಚಾಲಕರಿಗೆ ನಿಲ್ದಾಣ ಇಲ್ಲದೆ ಪರದಾಟ

ಮಂಜೇಶ್ವರ : ಜನನಿಬಿಡ ಪ್ರದೇಶವಾದ ಮಂಜೇಶ್ವರದ ಹೃದಯ ಭಾಗವಾದ ಹೊಸಂಗಡಿ ಜಂಕ್ಷನಿನಲ್ಲಿ ಟೆಂಪೋ ಟ್ಯಾಕ್ಸಿ ಚಾಲಕರಿಗೆ ನಿಲ್ದಾಣ ಇಲ್ಲದೇ ಇರುವ ಕಾರಣ ಜನ ನಿಬಿಡ ರಸ್ತೆಯಾದ ಮಂಜೇಶ್ವರದಿಂದ ಆನೆಕಲ್ಲು ಹೋಗುವ ರಸ್ತೆ ಬದಿಗಳಲ್ಲಿ ನಿಲ್ಲಿಸಬೇಕಾದ ಅನಿವಾರ್ಯತೆ  ಬಂದೊದಗಿರುವುದಾಗಿ ಟೆಂಪೋ ಚಾಲಕರು ಹೇಳುತ್ತಿದ್ದಾರೆ.ಮಾತ್ರವಲ್ಲದೆ ಟೆಂಪೋ ನಿಲ್ದಾಣದ ಹಿಂಭಾಗದ ಇಕ್ಕಾಟ್ಟಾದ ಸ್ಥಳದಲ್ಲಿ ರಿಕ್ಷಾಗಳು ಕೂಡಾ ಪಾರ್ಕಿಂಗ್ ಮಾಡುತ್ತಿವೆ.ಇವರಿಗೂ ಬೇರೆಡೆ ಸ್ಥಳಾವಕಾಶವಿಲ್ಲ.

ಒಟ್ವಿನಲ್ಲಿ ಈ ರಸ್ತೆಯಲ್ಲಿ ಬಸ್ಸುಗಳು ಸೇರಿದಂತೆ ಇತರ ವಾಹನಗಳಿಗೆ ಸಂಚರಿಸಲು ಕಷ್ಟ ಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಪರಿಸರದಲ್ಲಿ ಪಂಚಾಯಿತಿನ ಅಧೀನತೆಯಲ್ಲಿರುವ ಸ್ಥಳವಿದೆ.ಇದರಲ್ಲಿ ಸೂಕ್ತವಾದ ಟಿಂಪೋ ಟ್ಯಾಕ್ಸಿ ನಿಲ್ದಾಣವನ್ನು ನಿರ್ಮಿ ಸಲು ಅದೆಷ್ಟೋ ಸಲ ಸಂಬಂಧಪಟ್ಟವರಲ್ಲಿ ಕೇಳಿ ಕೊಂಡರೂ ಯಾವುದೇ ಫಲ ಕಾಣಲಿಲ್ಲವೆಂಬುದಾಗಿ ಚಾಲಕರು ಹೇಳುತ್ತಿದ್ದಾರೆ. ರಸ್ತೆ ಬದಿಗಳಲ್ಲಿ ಟೆಂಪೋ ನಿಲುಗಡೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳಿಗೆ  ಹಾಗೂ ದಾರಿ ಹೋಕರಿಗೆ ರಸ್ತೆ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ..

Related posts

Leave a Reply