Header Ads
Breaking News

ಮಂಜೇಶ್ವರ ಡಾನ್‌ಬಾಸ್ಕೋ ಶಾಲಾ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮ

ಮಂಜೇಶ್ವರದ ಡಾನ್ ಬೋಸ್ಕೋ ಶಾಲೆಯಲ್ಲಿ ಶುಕ್ರವಾರದಂದು ಶಾಲಾ ಮಕ್ಕಳ ಪ್ರವೇಶೋತ್ಸವ ನಡೆಯಿತು. ಶಾಲಾ ಮ್ಯಾನೇಜರ್ ವಂದನೀಯ ಗುರು ಮೈಕಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು.

ಶಾಲಾ ಮಕ್ಕಳಿಗೆ ಸಿಹಿ ತಿಂಡಿಗಳನ್ನು ನೀಡಿ ಬರಮಾಡಿಕೊಳ್ಳಲಾಯಿತು. ಶಾಲಾ ಪ್ರಾಂಶುಪಾಲ ವಂದನೀಯ ಗುರು ಅಗಸ್ಟಿನ್ ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಪಾವೂರು ಚರ್ಚ್‌ನ ವಂದನೀಯ ಗುರು ಸಿ.ಎಲ್. ವರ್ಗೀಸ್, ಪಿಟಿಎ ಅಧ್ಯಕ್ಷೆ ವಿನುತ, ಉಪಾಧ್ಯಕ್ಷೆ ದಿವ್ಯಾ, ಸಿಸ್ಟರ್ ಆಶಾ, ಟೀಚರ್ ಪ್ರಮೀಳಾ ಮೊದಲಾದವರು ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *