Header Ads
Header Ads
Breaking News

ಮಂಜೇಶ್ವರ: ಡಾಮರು ಕಾಣದ ಚೌಕಿ ಪ್ರದೇಶದ ರಸ್ತೆ

ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಾಣುತ್ತಿರುವ ಗ್ರಾಮೀಣ ಪ್ರದೇಶಗಳಲ್ಲೊಂದಾದ ಮಂಜೇಶ್ವರದ ರಾಗಂ ಚೌಕಿ ಪ್ರದೇಶದ ರಸ್ತೆಗಳಲ್ಲಿ ಚೌಕಿ ಪರಿಸರದಲ್ಲಿ ಸುಮಾರು200ಮೀಟರಿನಷ್ಟು ರಸ್ತೆಗೆ ಯಾವುದೇ ಡಾಮಾರಾಗಲೀ ಕಾಂಕ್ರೀಟಾಗಾಲೀ ಹಾಕದೇ ಕಳೆದ ಹಲವಾರು ವರ್ಷಗಳಿಂದ ಈ ರಸ್ತೆಯನ್ನು ಹಾಗೇ ಬಿಟ್ಟಿರುವುದು ಇಲ್ಲಿಯ ನಾಗರಿಕರಲ್ಲಿ ಅಸಮಧಾನವನ್ನು ಹುಟ್ಟಿಸಿದೆ.

ಚೌಕಿ ಪ್ರದೇಶದ ರಸ್ತೆ ಹಲವಾರು ವರುಷಗಳಿಂದ ಅಭಿವೃದ್ಧಿಯಾಗದೆ ಸಂಪೂರ್ಣ ಹದಗೆಟ್ಟು ಹೋಗಿದೆ. ಉಳಿದ ಒಂದು ಭಾಗವನ್ನು 2016-19ರ ಕಾಸರಗೋಡು ಜಿಲ್ಲಾ ಪಂಚಾಯತ್ ನಿಂದ ಮಂಜೂರಾದ 10ಲಕ್ಷ ರೂ. ಫಂಡ್‌ನಿಂದ ಪೂರ್ತೀಕರಿಸಿದರೆ ಇನ್ನೊಂದು ಭಾಗವನ್ನು ಮಂಜೇಶ್ವರ ಗ್ರಾ. ಪಂ. ನಿಂದ ಮಂಜೂರಾದ ಫಂಡಿನಿಂದ ಪೂರ್ತೀಕರಿಸಿ ಈ ಎರಡು ರಸ್ತೆಗಳ ಮಧ್ಯ ಭಾಗದಲ್ಲಿರುವ ಸುಮಾರು ೨೦೦ ಮೀಟರಿನಷ್ಟು ಭಾಗವನ್ನು ಹಾಗೇ ಕೈ ಬಿಡಲಾಗಿದೆ. ಒಂದು ಭಾಗಕ್ಕೆ ಕಾಂಕ್ರಿಟ್ ರಸ್ತೆಯಾದರೆ ಇನ್ನೊಂದು ಭಾಗಕ್ಕೆ ಡಾಮಾರಿನಿಂದ ರಸ್ತೆಯನ್ನು ಮಾಡಲಾಗಿದೆ.

ಅದ್ಯದಲ್ಲಿರುವ ರಸ್ತೆಗೆ ಫಂಡ್ ಸಾಕಾಗಲಿಲ್ಲವೆಂಬ ನೆಪ ಹೇಳಿ ಗುತ್ತಿಗೆದಾರ ಕೈ ತೊಳೆದಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ. ಗ್ರಾಮೀಣ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ಅದನ್ನು ಗ್ರಾ. ಪಂಚಾಯತಿನಿಂದಲೇ ಮಾಡಬೇಕಾಗಿದೆ ಎಂಬುದು ಜಿಲ್ಲಾ ಪಂ. ಜನಪ್ರತಿನಿಧಿ ಹರ್ಷಾದ್ ವರ್ಕಾಡಿ ಹೇಳುತಿದ್ದಾರೆ.

ಅಂತೂ ಅಂಬಿತ್ತಡಿ, ಪಾವೂರು, ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಾಗಬೇಕಾದ ಈ ರಸ್ತೆಯನ್ನು ಹಾಗೇ ಬಿಟ್ಟಿರುವ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟು ವಾಹನ ಸಂಚಾರಕ್ಕೂ ಆಯೋಗ್ಯವಾಗಿರುವುದಾಗಿ ಊರವರು ಹೇಳುತಿದ್ದಾರೆ. ಈ ಬಗ್ಗೆ ಇದರ ಪರಿಸರದಲ್ಲೇ ಕಾರ್ಯಾಚರಿಸುತ್ತಿರುವ ಸಿರಾಜುಲ್ ಹುದಾ ಶಾಲೆಯವರು ಕೂಡಾ ಜನಪ್ರತಿನಿಧಿಗಳಲ್ಲಿ ಅದೆಷ್ಟೋ ಸಲ ವಿನಂತಿಸಿಕೊಂಡಿದ್ದರೂ ಯಾವುದೇ ಫಲ ಕಾಣಲಿಲ್ಲವೆಂದು ಹೇಳುತಿದ್ದಾರೆ. ಬಳಿಕ ಶಾಲೆಯ ವತಿಯಿಂದಲ್ಲೇ ಅಲ್ಪ ಕಲ್ಲುಗಳನ್ನು ತುಂಬಿಸಿ ರಸ್ತೆಯನ್ನು ಸರಿಪಡಿಸಿದ್ದರೂ ಮತ್ತೆ ಅದೇ ರೀತಿಯಾಗಿ ಹೊಂಡಗಳು ತುಂಬಿಕೊಂಡಿವೆ, ಕಳೆದ ಸಲದ ಮಳೆಗಾಲದಲ್ಲಿ ಈ ರಸ್ತೆ ಯಲ್ಲಿ ಕೊಳದ ರೀತಿಯಲ್ಲಿ ನೀರು ತುಂಬಿ ವಾಹನ ಚಲಾಯಿಸಲು ಚಾಲಕರು ತಯಾರಾಗುತ್ತಿರಲಿಲ್ಲವೆಂದು ಊರವರು ಹೇಳುತಿದ್ದಾರೆ.

ಶಾಲೆ, ಚರ್ಚು, ಮಸೀದಿ ಮಾತ್ರವಲ್ಲದೆ ಹಲವಾರು ಕುಟುಂಬಗಳು ವಾಸಿಸುತ್ತಿರುವ ಈ ಪ್ರದೇಶದ ಈ ರಸ್ತೆಯನ್ನು ಅವಗಣಿಸುವುದು ಸರಿಯಲ್ಲ ಮಾತ್ರವಲ್ಲ ಸಂಬಂಧಪಟ್ಟವರು ಇತ್ತಕಡೆ ಗಮನ ಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಊರವರು ಪ್ರತಿಭಟನೆಗೆ ಸಜ್ಜಾಗುವುದಾಗಿ ಊರವರು ಹೇಳುತಿದ್ದಾರೆ.

Related posts

Leave a Reply