

ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನ ಚೆರ್ವತ್ತೂರು ಎಂಬಲ್ಲಿ ನಡೆದಿದೆ.
ಮಕ್ಕಳಿಗೆ ವಿಷ ನೀಡಿ ಸಾವನ್ನು ಖಾತ್ರಿಪಡಿಸಿದ ಬಳಿಕ ತಂದೆ ವಿಷ ಸೇವಿಸಿ ಸಾವನ್ನಪ್ಪಿರಬಹುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಚೆರ್ವತ್ತೂರು ನಿವಾಸಿ ರೂಪೇಶ್ ಹಾಗೂ ಹತ್ತು ವರ್ಷ ಪ್ರಾಯವಿರುವ ಮಗಳು ಹಾಗು ಆರು ವರ್ಷ ಪ್ರಾಯವಿರುವ ಮಗ ಸಾವನ್ನಪ್ಪಿದ್ದಾರೆ. ಪರಿಸರವಾಸಿಗಳ ಮಾಹಿತಿಯಂತೆ ಪೆÇಲೀಸರು ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ.