Header Ads
Header Ads
Header Ads
Breaking News

ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸಮಾರಂಭ

ಮಂಜೇಶ್ವರ : ಲೈಬ್ರೆರಿ ಕೌನ್ಸಿಲ್ ವಜ್ರ ಮಹೋತ್ಸವ ಈಗಾಗಲೇ ಪೂರ್ತಿಗೊಂಡಿದ್ದು ಇದರ ಭಾಗವಾಗಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸಮಾರಂಭ ಜನವರಿ 5 ರಂದು ಕುಂಬಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಷ್ಟ್ರಕವಿ ಗೋವಿಂದ ಪೈ ವೇದಿಕೆಯಲ್ಲಿ ನಡೆಯಲಿದೆ.ಈ ಬಗ್ಗೆ ಮಂಜೇಶ್ವರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪದಾಧಿಕಾರಿಗಳು 10 ಘಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಯು.ಶಾಮ ಭಟ್ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ನ್ಯಾ.ಪಿ.ಅಪ್ಪುಕ್ಕುಟ್ಟನ್ ಉದ್ಘಾಟಿಸುವರು. ವಾಸು ಪೇರೋಡ್, ಆಯಿಶಾ ಪೆಲಧ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಳಿಕ ವಿ.ವಿ.ಕೆ ಪನಚಿಯಾಲ ಸಂಸ್ಮರಣಾ ಭಾಷಣ ಮಾಡುವರು ಎಂದರುಸುದ್ದಿಗೋಷ್ಟಿಯಲ್ಲಿ ಅಹ್ಮದ್ ಹುಸೈನ್.ಪಿ.ಕೆ, ಶಾಮ್ ಭಟ್, ಡಿ.ಕಮಲಾಕ್ಷ, ಮೊಹಮ್ಮದ್ ಇಕ್ಬಾಲ್, ಎ.ಬಿ ರಾಧಾಕೃಷ್ಣನ್, ಉದಯ ಸಿ.ಎಚ್ಚ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *