Header Ads
Header Ads
Breaking News

ಮಂಜೇಶ್ವರ ತಾಲೂಕು ಹೆಡ್‌ಕ್ವಾಟರ್ಸ್ ಆಸ್ಪತ್ರೆ : ನೂತನ ಸೌಲಭ್ಯಗಳ ಉದ್ಘಾಟನಾ ಕಾರ್ಯಕ್ರಮ

ಮಂಜೇಶ್ವರ ಬ್ಲಾಕ್ ಪಂಚಾಯತಿ ಸ್ವಾಮ್ಯದಲ್ಲಿರುವ ಮಂಗಲ್ಪಾಡಿಯಲ್ಲಿ ಚಟುವಟಿಕೆ ನಡೆಸುತ್ತಿರುವ ತಾಲೂಕು ಹೆಡ್ ಕ್ವಾಟರ್ಸ್ ಆಸ್ಪತ್ರೆ ಇನ್ನು ಮುಂದೆ ವಿಸ್ತೃತ ಸೌಲಭ್ಯಗಳನ್ನು ಹೊಂದಲಿದೆ. ಕುಂಬಳೆ, ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ವರ್ಕಾಡಿ ಸಹಿತ ೮ ಗ್ರಾಮಪಂಚಾಯತಿಗಳ ಜನ ಈ ಆಸ್ಪತ್ರೆಯನ್ನು ಆಶ್ರಯಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ದಾಖಲಾತಿ ಚಿಕಿತ್ಸಾ ಸೌಲಭ್ಯವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ತುರ್ತು ನಿಗಾ ಘಟಕಕ್ಕೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಚಾಲನೆ ನೀಡಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್ ಪ್ರಧಾನ ಭಾಷಣ ಮಾಡಿದರು. ನ್ಯಾಷನಲ್ ಹೆಲ್ತ್ ಮಿಷನ್ ಜಿಲ್ಲಾ ಕಾರ್ಯಪ್ರಬಂಧಕ ಡಾ.ರಾಮನ್ ಸ್ವಾತಿವಾನ್, ವಿವಿಧ ಗ್ರಾಮಪಂಚಾಯತಿಗಳ ಅಧ್ಯಕ್ಷರಾದ ಶಾಹುಲ್ ಹಮೀದ್ ಬಂದ್ಯೋಡು,ಷಂಶಾದ್ ಶುಕೂರ್, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *