Header Ads
Breaking News

ಮಂಜೇಶ್ವರ : ತ್ಯಾಜ್ಯಗಳು ತುಂಬಿ ವಿಷಪೂರಿತ ಹಾವುಗಳ ಕೇಂದ್ರವಾಗುತ್ತಿರುವ ಪರಿಸರ

ರಾಜ್ಯಾದಾಧ್ಯಂತ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ವರ್ಷಗಳೇ ಕಳೆದಿದೆ. ಗಾಂಧೀಜಿ ಅವರ ಕಾಲದಿಂದಲೇ ಸ್ವಚ್ಛ ಭಾರತ ಕುರಿತು ಜನರಿಗೆ ಮನವರಿಕೆ ಮಾಡುವ ಕಾರ್ಯ ನಡೆದಿದೆ. ಆದರೆ ಮಂಜೇಶ್ವರದ ರಸ್ತೆ ಬದಿಗಳಲ್ಲಿ ಮಾತ್ರವಲ್ಲ ಒಳ ಪ್ರದೇಶಗಳ ಮನೆಗಳ ಸಮೀಪದಲ್ಲೇ ತ್ಯಾಜ್ಯಗಳನ್ನು ತಂದು ಹಾಕಿ ಸೊಳ್ಳೆಗಳ ಕೇಂದ್ರವನ್ನಾಗಿ ಮಾಡುವಲ್ಲಿ ಕೆಲವು ಸ್ವಚ್ಛ ಭಾರತ ವಿರೋಧಿಗಳು ಸಫಲರಾಗುತಿದ್ದಾರೆ.

ಇದೀಗ ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ 20ನೇ ವಾರ್ಡು ಬಿ.ಎಸ್ ನಗರದ ಮನೆಗಳ ಪರಿಸರದಲ್ಲೇ ಅಲ್ಪ ದೂರವಿರುವ ಮನೆಯವರು ತ್ಯಾಜ್ಯಗಳನ್ನು ತಂದು ಹಾಕುವುದಾಗಿ ದೂರಲಾಗುತ್ತಿದೆ. ಇದೀಗ ಇಲ್ಲಿ ತ್ಯಾಜ್ಯಗಳು ತುಂಬುವುದರ ಜೊತೆಯಾಗಿ ವಿಷಕಾರಿ ಹಾವಿನ ಉಪದ್ರಗಳು ಅತಿಯಾಗಿವೆ. ಇತ್ತೀಚೆಗೆ ಸಮೀಪದ ಮನೆಯೊಳಗೆ ವಿಷಪೂರಿತ ಹಾವೊಂದು ಬಂದು ಮನೆಯವರು ಅದ್ರಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಪರಿಸರವಾಸಿಗಳು ಹೇಳುತಿದ್ದಾರೆ..

ಮೊದಲಾಗಿದ್ದರೆ ಅಲ್ಲಲ್ಲಿ ಸಿಮೆಂಟ್ ಟ್ಯಾಂಕ್ ನಿರ್ಮಿಸಿ ಅಲ್ಲಿ ತ್ಯಾಜ್ಯಗಳನ್ನು ಹಾಕಲಾಗುತಿತ್ತು. ಆದರೆ ಅದನ್ನು ವಿಲೇವಾರಿ ಮಾಡಲು ವ್ಯವಸ್ಥೆ ಇಲ್ಲವಾಗಿರುವುದರಿಂದ ಅದು ಕೂಡಾ ನಿಂತು ಹೋಗಿದೆ. ಮನೆ ಪರಿಸರಗಳಲ್ಲಿ ಇಂತಹ ತ್ಯಾಜ್ಯಗಳನ್ನು ಹಾಕುವವರ ವಿರುದ್ದ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗುವಂತೆ ಪರಿಸರವಾಸಿಗಳು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *