Header Ads
Header Ads
Header Ads
Breaking News

ಮಂಜೇಶ್ವರ ನಿವಾಸಿ ತುಳಸೀದಾಸ್ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ದೆಹೆಲಿಯಲ್ಲಿ ಜರುಗಿದ ದಲಿತ್ ಸಾಹಿತ್ಯ ಅಕಾಡಮಿಯ ಮಹಾ ಸಮ್ಮೆಳನಲ್ಲಿ ಗೌರವ

 

ಆರ್ಥಿಕ ಸಾಮಾಜಿಕ ಶೈಕ್ಷಣಿಕ ರಂಗಗಳಲ್ಲಿ ತನ್ನನು ತೊಡಗಿಸಿಕೊಂಡು ಉತ್ತಮ ಸಮಾಜ ಸೇವಕರಾಗಿ ಗುರುತಿಸಿಕೊಂಡು ಹತ್ತು ಹಲವಾರು ಪ್ರಶಸ್ತಿಗಳಿಗೆ ಬಾಜನರಾದ ಮಂಜೇಶ್ವರ ನಿವಾಸಿ ತುಳಸೀದಾಸ್ ಅವರು ಭಾರತೀಯ ದಲಿತ ಸಾಹಿತ್ಯ ಅಕಾಡಮಿಯ ಡಾ. ಅಂಬೇಡ್ಕರ್ ಸೇವಾಶ್ರೀ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.ಇತ್ತೀಚಿಗೆ ನವದೆಹಲಿಯ ಪಂಚಶೀಲ ಆಶ್ರಮದಲ್ಲಿ ಜರಗಿದ ಭಾರತೀಯ ದಲಿತ್ ಸಾಹಿತ್ಯ ಅಕಾಡಮಿಯ ಮಹಾ ಸಮ್ಮೆಳನದಲ್ಲಿ ತುಳಸೀದಾಸ್ ಅವರಿಗೆ ಪ್ರಶಸ್ತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅವರು ತುಳಸೀದಾಸ್‌ಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭ ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪ್ಪಾಡಿ, ಪ್ರಧಾನ ಕಾರ್ಯದರ್ಶಿ ರಹ್ಮಾನ್ ಉದ್ಯಾವರ, ಉಪಾಧ್ಯಕ್ಷ ರತನ್ ಕುಮಾರ್ ಹೊಸಂಗಡಿ ಮೊದಲಾದವರು ಉಪಸ್ಥರಿದ್ದರು. ಮಂಜೇಶ್ವರ ಗುತ್ತು ಅಂಬೇಡ್ಕರ್ ಕಾಲನಿಯ ದಿವಂಗತ ನಾರಾಯಣ ಹಾಗೂ ಪೊನ್ನಮ್ಮರ ಪುತ್ರ ರಾಗಿರುವ ತುಳಸೀದಾಸ್ ಇದೀಗ ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದಾರೆ.

Related posts

Leave a Reply