Header Ads
Header Ads
Breaking News

ಮಂಜೇಶ್ವರ: ನೌಕರರು ಕೆಲಸದಲ್ಲಿರುವಾಗಲೇ ಕುಸಿದು ಬಿದ್ದ ಗ್ಯಾರೇಜ್

ಮಂಜೇಶ್ವರ: ನೌಕರರು ಕೆಲಸದಲ್ಲಿ ನಿರತರಾಗಿರುವಾಗಲೇ ವಾಹನಗಳ ಗ್ಯಾರೇಜ್ ಕಟ್ಟಡವೊಂದು ಕುಸಿದು ಬಿದ್ದಿದೆ. ಕುಂಜತ್ತೂರು ಹಳೆಯ ಆರ್‍ಟಿಒ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕಾಸರಗೋಡು ಕೋಟಕಣಿ ನಿವಾಸಿ ರವೀಂದ್ರ ಎಂಬವರ ಮಾಲಕತ್ವದಲ್ಲಿರುವ ಕಟ್ಟಡ ಕುಸಿದಿದೆ.ಹೆಂಚಿನಲ್ಲಿರುವ ಈ ಕಟ್ಟಡ ಪಕ್ಕಾಸು ಸಮೇತ ಕುಸಿದಿದೆ. ಈ ಸಂದರ್ಭ ನೌಕರರು ವಾಹನಗಳ ಕೆಲಸ ನಿರ್ವಹಿಸುತ್ತಾ ಇದ್ದರೂ ಕಾರ್ಮಿಕರು ಅದೃಷ್ಟವಶಾತ್ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದರೂ ಗ್ಯಾರೇಜಿನೊಳಗಿದ್ದ ಎರಡು ವಾಹನಗಳು ಹಾನಿಗೊಂಡಿದೆ. ಸುಮಾರು ಐದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಸಂಬಂಧಪಟ್ಟವರಿಗೆ ದೂರು ನೀಡಲಾಗಿರುವುದಾಗಿ ಗ್ಯಾರೇಜ್ ಮಾಲಕ ತಿಳಿಸಿದ್ದಾರೆ.

Related posts

Leave a Reply