Header Ads
Breaking News

ಮಂಜೇಶ್ವರ ಪರಿಸರದಲ್ಲಿ ಸಂಘರ್ಷ : ಪರಿಸ್ಥಿತಿ ಕೈಮೀರದಂತೆ ಪೊಲೀಸರಿಂದ ಬಿಗಿ ಕಟ್ಟೆಚ್ಚರ

ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಸಂಸದ ಉಣ್ಣಿತ್ತಾನ್‌ರ ವಾಹನ ರಾಲಿಯೊಂದಿಗೆ ಭುಗಿಲೆದ್ದ ಸಂಘರ್ಷ ಗಡಿಪ್ರದೇಶಗಳಲ್ಲಿ ಮುಂದುವರಿದಿದೆ. ಕಿಡಿಗೇಡಿಗಳು ಎರಡು ಅಂಗಡಿಗಳಿಗೆ ಕಲ್ಲೆಸೆದು ಹಾನಿಗೊಳಿಸಿದ್ದಾರೆ.

ತಂಡವೊಂದು ದಿಢೀರ್ ಆಗಮಿಸಿ ತೂಮಿನಾಡಿನ ಶರತ್ ಎಂಬವರ ಮಾಲಕತ್ವದ ಬಟ್ಟೆ ಅಂಗಡಿಗೆ ಕಲ್ಲೆಸೆದು ಗಾಜನ್ನು ಪುಡಿಗೈದಿದೆ. ತಂಡವನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ. ಕಲ್ಲೆಸೆತದಿಂದ ಒಬ್ಬರು ಮಹಿಳೆ ಮತ್ತು ಒಬ್ಬ ಯುವಕ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದರೂ ಪೊಲೀಸರನ್ನು ಲೆಕ್ಕಿಸದ ಕಿಡಿಗೇಡಿಗಳು ಪ್ರತಿಕಾರ ಎನ್ನುವಂತೆ ರಾತ್ರಿ ತೂಮಿನಾಡಿನಲ್ಲಿರುವ ಅಬ್ದುಲ್ ಸತ್ತಾರ್ ಅವರ ಮಾಲಕತ್ವದ ಬೇಕರಿಯ ಗಾಜನ್ನು ಪುಡಿಗೈದಿದ್ದಾರೆ. ಈ ಮೊದಲು ಕೂಡಾ ಇಲ್ಲಿ ಸಂಘರ್ಷಾವಸ್ಥೆ ಉಂಟಾದಾಗ ಇದೆ ಬೇಕರಿಯ ಗಾಜನ್ನು ಪುಡಿಗೈಯಲಾಗಿತ್ತು. ಪೊಲೀಸರು ಇರುವಾಗಲೇ ರಾತ್ರಿ ವೇಳೆಯಲ್ಲಿ ಕಲ್ಲೆಸೆದು ಎರಡು ಭಾಗದ ಗಾಜುಗಳನ್ನು ಪುಡಿಗೈಯಲಾಗಿದೆ.

ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂಗಡಿಗೆ ಸಿ ಸಿ ಕ್ಯಾಮರಾ ಅಳವಡಿಸಿರುವ ಹಿನ್ನೆಲೆಯಲ್ಲಿ ಸಿ ಸಿ ಕ್ಯಾಮರಾ ದೃಶ್ಯವನ್ನು ಕೇಂದ್ರೀಕರಿಸಿ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ. ಮಂಜೇಶ್ವರ ವ್ಯಾಪಾರಿ ಏಕೋಪನ ಸಮಿತಿ ಘಟನೆಯನ್ನು ಖಂಡಿಸಿದೆ. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಂದಲೇ ನಷ್ಟ ಪರಿಹಾರವನ್ನು ಕೊಡಿಸುವಂತೆ ಮಂಜೇಶ್ವರ ಘಟಕದ ಅಧ್ಯಕ್ಷ ಬಶೀರ್ ಕನಿಲ ಪೊಲೀಸರನ್ನು ಒತ್ತಾಯಿಸಿದ್ದಾರೆ.

Related posts

Leave a Reply

Your email address will not be published. Required fields are marked *