Header Ads
Breaking News

ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ : ಕಳ್ಳತನ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ರಾತ್ರಿ ವೇಳೆಯಲ್ಲಿ ಕದಿಯಲು ಬಂದ ಕಳ್ಳ ಖದೀಮನೊಬ್ಬ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾನೆ. ಮಂಜೇಶ್ವರ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿರುವ ತೂಮಿನಾಡು ಮಾಸ್ಟರ್ ಮೈಂಡ್ ಜಂಕ್ಷನಿನಲ್ಲಿ ಕಾರ್ಯಾಚರಿಸುತ್ತಿರುವ ಮೂಕಾಂಬಿಕಾ ಹೋಟೆಲ್ ಹಾಗೂ ಹನಿ ಬೇಕರಿ ವ್ಯಾಪಾರ ಮಳಿಗೆಗಳಿಗೆ ಖದೀಮ ಕಳ್ಳನೊಬ್ಬ ಕಳೆದ ರಾತ್ರಿ ಹೋಟೆಲ್ ನ ಗ್ಲಾಸುಗಳನ್ನು ಮುರಿದು ಒಳನುಗ್ಗಿ ಕಳವಿಗೆತ್ನ ನಡೆಸಿದ್ದಾನೆ.

ಹೋಟೆಲಿನ ಒಳಗೆ ನುಗ್ಗಿದ ಕಳ್ಳ ಹೋಟೆಲಿನಲ್ಲಿ ಹುಡುಕಾಡಿದಾಗ ಏನು ಸಿಗದ ಹಿನ್ನೆಲೆಯಲ್ಲಿ ಅದರ ಒಳಭಾಗದಿಂದಲೇ ಬೇಕರಿಗೆ ನುಗ್ಗಿ ಹಣದ ಕ್ಯಾಶ್ ಡ್ರವರನ್ನು ಚೆಲ್ಲಾಪಿಲ್ಲಿಗೊಳಿಸಿ ಅದರೊಳಗಿದ್ದ ಸಣ್ಣ ಮೊತ್ತದ ನಗದನ್ನು ಎಗರಿಸಿದ್ದಾನೆ. ಆದರೆ ಅದರ ಸಮೀಪವೇ ಅಡಗಿಸಿಟ್ಟಿದ್ದ ದೊಡ್ಡ ಮೊತ್ತದ ನಗದು ಕಳ್ಳನ ಕೈಗೆ ಸಿಕ್ಕಿರಲಿಲ್ಲ. ಕಳ್ಳ ಒಳಗೆ ಕಳವು ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮರಾ ಪರಿಶೋಧಿಸಿದಾಗ ಊರವರು ಕಳ್ಳನ ಗುರುತನ್ನು ಪತ್ತೆ ಹಚ್ಚಿದ್ದಾರೆ. ಈತ ಅಪರಿಚಿತನಾಗಿದ್ದು, ಹಗಲು ವೇಳೆಯಲ್ಲಿ ಒಂದು ಸೈಕಲಿನಲ್ಲಿ ಅಲೆದಾಡುತ್ತಾ ಹುಚ್ಚರಂತೆ ನಟಿಸುತ್ತಿದ್ದನೆಂದು ಊರವರು ಹೇಳಿದ್ದಾರೆ. ಕಳೆದ ಒಂದು ವಾರದಿಂದ ಈ ವ್ಯಕ್ತಿಯನ್ನು ಕುಂಜತ್ತೂರು ಹಾಗೂ ತೂಮಿನಾಡು ಪರಿಸರಗಳಲ್ಲಿ ಸ್ಥಳೀಯರು ಗಮನಿಸಿದ್ದಾರೆ. ಹಲವಾರು ಮಂದಿ ಈತನ ನಡು ರಾತ್ರಿಯಲ್ಲಿ ತಿರುಗಾಡುತ್ತಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.


ಮಂಜೇಶ್ವರ ಎಸ್‍ಐ ರಾಘವನ್ ನೇತೃತ್ವದ ಪೊಲೀಸ್ರು ಆಗಮಿಸಿ ಪರಿಶೋಧಿಸಿ ಪ್ರಾಥಮಿಕ ಮಾಹಿತಿ ಹೊರಹಾಕಿದ್ದಾರೆ. ಪೊಲೀಸ್ರು ಕಳ್ಳನಿಗಾಗಿ ಶೋಧ ಆರಂಭಿಸಿದ್ದಾರೆ. ಯಾರಾದರೂ ಈ ವ್ಯಕ್ತಿಯನ್ನು ಎಲ್ಲಿಯಾದರೂ ಪತ್ತೆ ಹಚ್ಚಿದರೆ ಮಂಜೇಶ್ವರ

ಪೊಲೀಸ್ರಿಗೆ ಒಪ್ಪಿಸುವಂತೆ ಕೋರಲಾಗಿದೆ.

Related posts

Leave a Reply

Your email address will not be published. Required fields are marked *