Header Ads
Header Ads
Breaking News

ಮಂಜೇಶ್ವರ: ಪ್ರಕೃತಿ ಸಂರಕ್ಷಣಾ ಕ್ಲಬ್ ನಿರ್ಮಿಸಿದ ಬೇರು ಕಿರುಚಿತ್ರಕ್ಕೆ ಚಾಲನೆ

ಮಂಜೇಶ್ವರ : ಪ್ರಕೃತಿಯನ್ನು ಪ್ರೀತಿಸಲು ಹಾಗೂ ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಲು ಕಲಿಯಬೇಕೆಂದು ವಿದ್ಯಾರ್ಥಿಗಳಿಗೆ ಪೊಫೆಸರ್.ಎಂ.ಎನ್ ರಹ್ಮಾನ್ ಸಲಹೆಯನ್ನಿತ್ತರು. ಅವರು ಮಾನ್ಯ ಜ್ಞಾನೋದಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಕೃತಿ ಸಂರಕ್ಷಣಾ ಕ್ಲಬ್ ತಯಾರಿಸಿದ ಬೇರು ಎಂಬ ಕಿರುಚಿತ್ರಕ್ಕೆ ಚಾಲನೆ ನೀಡಿ ಮಾತನಾಡುತಿದ್ದರು.ಹೆಸರಾಂತ ಪರಿಸರ ಸ್ನೇಹಿ, ಪ್ರಕೃತಿ ಸಂರಕ್ಷಕರಾಗಿರುವ ಇವರು ಹಲವಾರು ಡೊಕ್ಯುಮೆಂಟರಿಗಳ ನಿರ್ದೇಶಕರು ಆಗಿದ್ದಾರೆ.

ವಿನು ಬೋವಿಕ್ಕಾನ ನಿರ್ದೇಶಿಸಿರುವ ಕಿರು ಚಿತ್ರದಲ್ಲಿ ಕು.ದೇವಾನಂದ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕೃತಿ ವರದಾನವಾಗಿ ನೀಡಿರುವ ಅಮೂಲ್ಯವಾದ ಗಿಡಮರಗಳನ್ನು ಗುಡ್ಡ ಬೆಟ್ಟಗಳನ್ನು ಹಾಗೂ ನೀರಿನ ಮೂಲಗಳನ್ನು ಮನುಷ್ಯನ ಸ್ವಾರ್ಥ ನಾಶದಂಚಿಗೆ ತಳ್ಳಿ ಮುಂದಿನ ಜನಾಂಗ ಈ ಸಂಪತ್ತಿನಿಂದ ವಂಚಿತರಾಗಿ ಕಷ್ಟ ಪಡುವಂತೆ ಮಾಡುತ್ತಿರುವುದರ ಕುರಿತಾದ ಎಚ್ಚರಿಕೆಯ ಗಂಟೆಯೇ ಬೇರು ಕಿರು ಚಿತ್ರ.ಶಾಲಾ ಮುಖ್ಯೋಪಾಧ್ಯಾಯರಾಗಿರುವ ಗೋವಿಂದನ್ ನಂಬೂದಿರಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಜೆ.ಬಿ. ವತ್ಸನ್ ಮಾಸ್ಟರ್ ಮುಖ್ಯ ಅತಿಥಿಯಾಗಿದ್ದರು. ಅಖಿಲೇಶ್ ನಗುಮುಗಂ, ಅನೀಶ್, ಶ್ರೀಜಾ, ವಿನು ಬೋವಿಕ್ಕಾನ, ಪಿಟಿಎ ಅಧ್ಯಕ್ಷ ಸತೀಶ, ಎಂ. ಆಶಾ ಕಿರಣ್, ಎಂ. ಸುರೇಂದ್ರನ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply