Header Ads
Header Ads
Breaking News

ಮಂಜೇಶ್ವರ: ಪ್ರವಾದಿ ಮೊಹಮ್ಮದ್ ನೆಬಿಯವರ ಜನ್ಮ ದಿನಾಚರಣೆ

ಪ್ರವಾದಿ ಮೊಹಮ್ಮದ್ ನೆಬಿಯವರ ಜನ್ಮ ದಿನಾಚರಣೆ ಶಂಶುಲ್ ಉಲಮಾ ಇಸ್ಲಾಮಿಕ್ ಸೆಂಟರಿನ ವತಿಯಿಂದ ಭಾರೀ ವಿಜೃಂಭಣೆಯಿಂದ ನಡೆಸಲು ಸ್ವಾಗತ ಸಮಿತಿ ರಚನೆ ಮಾಡಲಾಯಿತು.ಸಂಘಟನೆಯ ಅಧ್ಯಕ್ಷ ಅಬೂಬಕ್ಕರ್ ಮಾಹಿನ್ ಹಾಜಿಯವರ ಅಧ್ಯಕ್ಷತೆಯಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಇರ್ಷಾದ್ ನಗರ ಉದ್ಯಾವರದಲ್ಲಿ ನಡೆದ ಕಾರ್ಯಕ್ರಮವನ್ನು ಫಾರೂಕ್ ಮೌಲವಿ ಉದ್ಘಾಟಿಸಿದರು.

ನಾಸರ್ ಯಮಾನಿ ಪಾವೂರು ಮುಖ್ಯ ಪ್ರಭಾಷಣ ನಡೆಸಿದರು. ವೇದಿಕೆಯಲ್ಲಿ ಯು ಎಚ್ ಅಬ್ದುಲ್ ರಹ್ಮಾನ್, ಮುಸ್ತಫ ಉದ್ಯಾವರ, ಬಾವ ಹಾಜಿ, ಇಬ್ರಾಹಿಂ ಬಟರ್ ಫ್ಲೈ, ಬಶೀರ್ ಕರೋಡಾ ಸೇರಿದಂತೆ ಹಲವರು ಉಪಸ್ಥರಿದ್ದರು.

Related posts

Leave a Reply