Header Ads
Header Ads
Breaking News

ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಹೊಸ ವರ್ಷ, ಕ್ರಿಸ್‌ಮಸ್ ಆಚರಣೆ ಪತ್ರಕರ್ತರು ಸಮಾಜ ಸುಧಾರಕರು ಸ್ಪರ್ಶಂ ಅಕಾಡೆಮಿಯ ಸ್ಥಾಪಕಿ ಜೀನಾ ಲವೀನಾ ಮೊಂತೇರೋ ಅಭಿಪ್ರಾಯ

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ನಾಗರಿಕ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಪತ್ರಕರ್ತರು ಸಮಾಜ ಸುಧಾಕರರಾಗಿದ್ದು, ಅವರ ಸೇವೆ ನಿಜಕ್ಕೂ ಸ್ವಾಗತರ್ಹವಾಗಿದೆ ಎಂದು ಮಂಜೇಶ್ವರ ಸ್ಪರ್ಶಂ ಅಕಾಡಮಿಯ ಸ್ಥಾಪಕಿ ಜೀನಾ ಲವೀನಾ ಮೊಂತೇರೋ ಹೇಳಿದರು.

ಅವರು ಮಂಜೇಶ್ವರ ಪ್ರೆಸ್‌ಕ್ಲಬ್‌ನ ಆಶ್ರಯದಲ್ಲಿ ಹೊಸಂಗಡಿ ಗೇಟ್ ವೇ ಆಡಿಟೋರಿಯಂ ನಲ್ಲಿ ಜರಗಿದ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತರರ ಸುದ್ದಿಗಾಗಿ ದಿನನಿತ್ಯವೂ ಓಡಾಡುತ್ತಿರುವ ಪತ್ರಕರ್ತರು ಇಂದು ಅವರ ಸಂತೋಷವನ್ನು ಇತರರ ಮುಂದೆ ಹಂಚಿಕೊಂಡಿದ್ದಾರೆ. ಅನ್ಯಾಯ ಮಾಡುವವರಿಗೆ ನ್ಯಾಯವನ್ನು ಒದಗಿಸಿ ಕೊಡುವವರು, ಅರಿವಿಲ್ಲದವರಿಗೆ ಅರಿವನ್ನು ಮೂಡಿಸುವಂತಹ ಪತ್ರಕರ್ತರು ನಿಜವಾಗಿಯೂ ಸಮಾಜ ಸೇವಕರೇ ಆಗಿದ್ದಾರೆ ಎಂದು ಹೇಳಿದರು.

ಮಂಜೇಶ್ವರ ಪ್ರೆಸ್‌ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ಅಧ್ಯಕ್ಷ ಬಶೀರ್ ಕನಿಲ, ಎ‌ಐವೈ ಎಫ್ ನೇತಾರ ಹರೀಶ್, ಡಿವೈ ಫ್ ಐ ಮಂಜೇಶ್ವರ ಅಧ್ಯಕ್ಷ ಪ್ರಶಾಂತ್ ಕನಿಲ, ಸಂಸ್ಕಾರ ಸಾಹಿತಿ ಆಧ್ಯಕ್ಷ ಸತೀಶ ಅಡಪ, ರಫೀಕ್ ಫ್ಲೆಕ್ಸ್ ಪಾಯಿಂಟ್, ಹಿರಿಯ ಪತ್ರಕರ್ತ ಹಾಗೂ ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಪತ್ರಕರ್ತರಾದ ರವಿ ಪ್ರತಾಪ ನಗರ, ರಹ್ಮಾನ್ ಪಾರಕಟ್ಟೆ, ರತನ್ ಕುಮಾರ್ ಹೊಸಂಗಡಿ, ಛಾಯಾಗ್ರಾಹಕ ದೀಪಕ್, ಹನೀಸ್ ಉಪ್ಪಳ, ಉಬೈ ಕುಕ್ಕಾರ್, ಮೊದಲಾದವರು ಉಪಸ್ಥರಿದ್ದರು.