Header Ads
Header Ads
Breaking News

ಮಂಜೇಶ್ವರ ಪ್ರೆಸ್‌ಕ್ಲಬ್ ವತಿಯಿಂದ ಸಂಭ್ರಮದ ದೀಪಾವಳಿ

ಮಂಜೇಶ್ವರ : ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಸಂಭ್ರಮದಿಂದ ದೀಪಾವಳಿ ಆಚರಿಸಲಾಲಾಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ರಹಿಮಾನ್ ಉದ್ಯಾವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಈ ದೀಪಾವಳಿ ಹಬ್ಬ ಶುಭವನ್ನು ತರಲಿ ಎಂದು ಹಾರೈಸಿದರು. ಪ್ರೆಸ್‌ಕ್ಲಬ್ ಕಾರ್ಯದರ್ಶಿ ಆರಿಫ್ ಮಚ್ಚಮ್‌ಪ್ಪಾಡಿ ,ಕೋಶಾಧಿಕಾರಿ ಸನಲ್ ಕುಮಾರ್. ಪತ್ರಕರ್ತರಾದ ಸಾಯಿಭದ್ರ ರೈ, ರವಿ ಪ್ರತಾಪ್ ನಗರ, ಸಲಾಂ ವರ್ಕಾಡಿ, ರತನ್ ಕುಮಾರ್ ಹೊಸಂಗಡಿ, ಛಾಯಾಗ್ರಾಹಕ ದೀಪಕ್ ರಾಜ್ ಉಪ್ಪಳ, ಮೊದಲಾದವರು ಮಾತನಾಡಿದರು. ಬಳಿಕ ದೀಪ ಬೆಳಗಿಸಿ, ಪಟಾಕಿ ಸಿಡಿಸಿ ಸಿಹಿ ತಿಂಡಿಗಳನ್ನು ವಿತರಿಸಿ ದೀಪಾವಳಿ ಹಬ್ಬವನ್ನು ಸಂಭ್ರಮ ಹಾಗು ಸಡಗರದಿಂದ ಆಚರಿಸಲಾಯಿತು.

Related posts

Leave a Reply

Your email address will not be published. Required fields are marked *